Home ಟಾಪ್ ಸುದ್ದಿಗಳು ಅಹಮ್ಮದೀಯ ಮುಸ್ಲಿಂ ಸಮುದಾಯದಿಂದ “ಸ್ಥಿರ ಶಾಂತಿ ಮೂಲತತ್ವಗಳು ” ಕುರಿತ ವಿಚಾರ ಸಂಕಿರಣ

ಅಹಮ್ಮದೀಯ ಮುಸ್ಲಿಂ ಸಮುದಾಯದಿಂದ “ಸ್ಥಿರ ಶಾಂತಿ ಮೂಲತತ್ವಗಳು ” ಕುರಿತ ವಿಚಾರ ಸಂಕಿರಣ

►ಪ್ರಸ್ತುತ ಭಯವೇ ಧರ್ಮದ ಮೂಲವಯ್ಯ ವಾತವರಣ ನಿರ್ಮಾಣ; ನಟರಾಜ್ ಹುಳಿಯಾರ್

ಬೆಂಗಳೂರು: ಅಹಮ್ಮದೀಯ ಮುಸ್ಲಿಂ ಸಮುದಾಯತಿಯಿಂದ “ಸ್ಥಿರ ಶಾಂತಿ ಸ್ಥಾಪಿಸುವ ಮೂಲತತ್ವಗಳು” ಎಂಬ ವಿಷಯ ಕುರಿತ ವಿಚಾರ ಸಂಕಿರಣ ವನ್ನು ಬೆಂಗಳೂರಿನಲ್ಲಿಂದು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ವಿವಿಧ ಬುದ್ದಿ ಜೀವಿಗಳು, ಧಾರ್ಮಿಕ ಗುರುಗಳು, ಸಮಾಜದ ವಿವಿಧ ಗಣ್ಯರು ಭಾಗವಹಿಸಿದ್ದರು.

ಅಹ್ಮದೀಯ ಮುಸ್ಲಿಂ ಸಮುದಾಯದ ಕೆ.ಕೆ.ಬದ್ರುದ್ದೀನ್ ಮಾತನಾಡಿ, ವಿಶ್ವದಲ್ಲಿ ದೀರ್ಘಕಾಲಿನ ಶಾಂತಿ ಸ್ಥಾಪನೆಗೆ ಸಂಬಂಧಿಸಿದಂತೆ ಇಸ್ಲಾಮಿಕ್ ತತ್ವಗಳನ್ನು ವಿವಿರಿಸಿದ ಅವರು ಕುರಾನಿನ ಯಾವುದೇ ಅಧ್ಯಾಯ ದಲ್ಲಿ ಹಿಂಸೆ, ಖಡ್ಗ ಕತ್ತಿಯ ಸಂಸ್ಕೃತಿಯನ್ನು ಹೇಳಿಲ್ಲ. ಇಸ್ಲಾಮಿಕ್ ಅಂತರ್ಗತದಲ್ಲಿ ಅಡಗಿರುವ ಶಾಂತಿ, ಕರುಣಾಮಯಿ ಬದುಕಿನ ಬಗ್ಗೆ ಹೇಳಿದೆ. ವಿಶ್ವದಲ್ಲಿ ಯಾವಾಗ ಶಾಂತಿ ಸ್ಥಾಪನೆಯಾಗುವುದಿಲ್ಲವೋ ಅಲ್ಲಿಯವರೆಗೂ ಶಾಂತಿಯುತ ಬದುಕು ಕಾಣಲು ಸಾಧ್ಯವಿಲ್ಲ. ಧರ್ಮಗಳ ನಡುವೆ ಇಟ್ಟಿಗೆಯಿಂದ ಕಟ್ಟಿದ ಗೋಡೆಯ ರೀತಿ ಕಟ್ಟುಪಾಡುಗಳು ಇರಬಾರದು ಎಂದು ಹೇಳಿದರು.

ಚಿಂತಕ, ಗಾಂಧಿ ಅಧ್ಯಯನ ಕೇಂದ್ರದ ನಟರಾಜ್ ಹುಳಿಯಾರ್ ಮಾತನಾಡಿ, ಭಾರತದಲ್ಲಿ ಕ್ರಿಶ್ಚಿಯನ್,ಮುಸ್ಲಿಂ,ಹಿಂದೂಯಿಸಂ ಎಲ್ಲ ರೀತಿಯ ಧರ್ಮಗಳು ಇಲ್ಲಿಯೇ ಹುಟ್ಟಿದ್ದು ಭಾರತದಲ್ಲಿ ದಯವೇ ಧರ್ಮದ ಮೂಲವಯ್ಯ ಎಂಬ ಇತ್ತು. ಪ್ರಸ್ತುತ ಭಯವೇ ಧರ್ಮದ ಮೂಲವಯ್ಯ ಎಂಬ ವಾತಾವರಣ ನಿರ್ಮಾಣವಾಗಿದೆ. ಟಿಪ್ಪು ಸುಲ್ತಾನ್ ಜಾರಿ ತಂದ ಕಂದಾಯ ಪದ್ದತಿ, ಇತರೆ ಸುಧಾರಣೆ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳೋಣ.ಅವರ ಮೂರ್ತಿ ನಾಶ ವೈಖರಿಯನ್ನು ವಿರೋಧಿಸೋಣ ಎಂದು ಹೇಳಿದರು.

ಚರಿತ್ರೆಯ ಚಕ್ರ ಪ್ರಸ್ತುತ ತಿರುಗಿ ಬಿದ್ದಿದೆ.ಭಾರತದ ಮೌಲ್ಯಗಳು ಇಂದು ತಿರುಗಿ ಬಿದ್ದಿವೆ.ಭಾರತದ ಪ್ರಧಾನಿಗಳು ಬಳಸುತ್ತಿರುವ ಭಾಷೆ  ಇಂದು ಅಪಾಯಕಾರಿಯಾಗಿದೆ. ಈ ಹಿಂದೆ ಪ್ರಧಾನಿಗಳಾಗಿದ್ದ ನೆಹರು, ಇಂದಿರಾಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ ಇಂತಹ ಭಾಷೆಯನ್ನು ಬಳಸಿರಲಿಲ್ಲ. ಲೋಹಿಯಾ ಅವರು ಹೇಳಿರುವಂತೆ ಕೇಡಿನ ಜೊತೆ ಅಲ್ಪಕಾಲ ಸಂಬಂಧ ಹೊಂದಿರ ಬೇಕು, ಶಾಂತಿಯ ಜೊತೆ ದೀರ್ಘಕಾಲಿನ ಸಂಬಂಧ ಹೊಂದಿರಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಮಾತನಾಡಿ,ಕೋಮುಗಳ ಮಧ್ಯೆ ನಡೆಯುವ ಸಂಘರ್ಷದಿಂದ ನಾವು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ. ಕರ್ಫ್ಯೂ ನಂತಹ ನಿಬಂಧನೆಗಳಿಂದ ಕುಟುಂಬಗಳು ಅನುಭವವಿಸುವ ನೋವು ಯಾರಿಗೂ ಬೇಕಿಲ್ಲ ಎಂದರು.

ಅಹ್ಮದೀಯ ಮುಸ್ಲಿಂ ಯೂತ್ ಅಸೋಸಿಯೇಷನ್ ಅಧ್ಯಕ್ಷ ಜನಬ್ ಕೆ.ತಾರಿಖ್ ಅಹಮದ್ ಸಾಹಿಬ್, ಪತ್ರಕರ್ತೆ ಅನೂಷ ರವಿ ಸೂದ್, ಜಕ್ಕೂರು ಅಹ್ಮದೀಯ ಮುಸ್ಲಿಂ ಸಮುದಾಯದ ಅಧ್ಯಕ್ಷ ಮಹಮದ್ ಇರ್ಫಾನ್ ಸಾಹೇಬ್ ಮತ್ತಿತರರು ಹಾಜರಿದ್ದು ಐಕ್ಯತೆ ಕುರಿತು ಉಪನ್ಯಾಸ ನೀಡಿದರು.

Join Whatsapp
Exit mobile version