Home ಟಾಪ್ ಸುದ್ದಿಗಳು ಸೊಸೆಯ ಚಿನ್ನಾಭರಣ ವಶದಲ್ಲಿಡುವುದು ಕ್ರೌರ್ಯವಲ್ಲ: ಸುಪ್ರೀಮ್ ಕೋರ್ಟ್

ಸೊಸೆಯ ಚಿನ್ನಾಭರಣ ವಶದಲ್ಲಿಡುವುದು ಕ್ರೌರ್ಯವಲ್ಲ: ಸುಪ್ರೀಮ್ ಕೋರ್ಟ್

ನವದೆಹಲಿ: ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಸೊಸೆಯ ಆಭರಣಗಳನ್ನು ಸುರಕ್ಷತೆಗಾಗಿ ಪತಿಯ ಪೋಷಕರ ವಶದಲ್ಲಿಡುವುದು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ಪೀಠ, ಪಂಜಾಬ್ ನ ಗೃಹಿಣಿಯೊಬ್ಬರು ಸಲ್ಲಿಸಿದ ಮೇಲ್ಮನವಿ ಅರ್ಜಿಯ ಬಗ್ಗೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಪತಿ ಅಥವಾ ಆತನ ಸಂಬಂಧಿಕರ ಕಿರುಕುಳದ ಕುರಿತು ಸಂತ್ರಸ್ತೆ ನೀಡುವ ದೂರು ಈ ಸೆಕ್ಷನ್ ನ ವ್ಯಾಪ್ತಿಗೆ ಬರಲಿದೆ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ.

ಅರ್ಜಿದಾರರು ಅತ್ತೆ ಮತ್ತು ಮೈದುನ ಚಿನ್ನಾಭರಣಗಳನ್ನು ತೆಗೆದಿರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದು, ಆಭರಣಗಳ ಕುರಿತು ವಿವರ ಸಲ್ಲಿಸಿಲ್ಲ. ಎಲ್ಲರೂ ಸೇರಿಕೊಂಡು ನನ್ನ ಜೀವನ ಹಾಳುಮಾಡಿದ್ದಾರೆಂಬ ಸಾಮಾನ್ಯ ಆರೋಪವನ್ನಷ್ಟೆ ಮಾಡಿದ್ದಾರೆ ಎಂದು ಸುಪ್ರೀಮ್ ಕೋರ್ಟ್ ತಿಳಿಸಿದೆ.

Join Whatsapp
Exit mobile version