ಕೂಸಿಗೆ ಡೈಪರ್ ಬದಲಿಸುವುದಕ್ಕಿಂತ ಹೆಚ್ಚು ಆಟಗಾರರನ್ನು ಬದಲಾಯಿಸುತ್ತಾರೆ | ಪಂಜಾಬ್ ಕಿಂಗ್ಸ್ ನೀತಿಗೆ ಸೆಹ್ವಾಗ್ ಕಿಡಿ

Prasthutha|

ದುಬೈ: ಭಾರತದ ಮಾಜಿ ಕ್ರಿಕೆಟರ್ ,ಪಂಜಾಬ್ ಕಿಂಗ್ಸ್ ನ ಮಾಜಿ ನಾಯಕ ವಿರೇಂದ್ರ ಸೆಹ್ವಾಗ್ ಪಂಜಾಬ್ ಕಿಂಗ್ಸಿನ ನೀತಿಯ ವಿರುಧ್ದ ಕಿಡಿಕಾರಿದ್ದಾರೆ. ಪ್ರತೀ ಪಂದ್ಯಕ್ಕೆ ಆಟಗಾರನನ್ನು ಬದಲಿಸುವ ಪಂಜಾಬ್ ತಂಡದ ವಿರುದ್ಧ ಸೆಹ್ವಾಗ್ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

- Advertisement -

ಪಂಜಾಬ್ ತನ್ನ 11 ಆಟಗಾರರನ್ನು ಬದಲಾಯಿಸುವಷ್ಟು ಕೂಸಿಗೆ ಡೈಪರ್ ಕೂಡ ಬದಲಾಯಿಸುವುದಿಲ್ಲ ಎಂದು ಕಿಂಗ್ಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಪದೇ ಪದೇ ಆಟಗಾರರನ್ನು ಬದಲಾವಣೆಗೊಳಿಸುವುದರಿಂದಲೇ ಪಂಜಾಬ್ ತಂಡ ಸೋಲುತ್ತಿದೆ, ಈ ತಂಡ ಈಗಾಗಲೇ ಏಳು ಪಂದ್ಯಗಳಲ್ಲಿ ತನ್ನ ಬೌಲಿಂಗ್ ಅನ್ನು ಬದಲಾಯಿಸಿದೆ, ಇವರು ಯಾರನ್ನು ಆಡಿಸುತ್ತಾರೆ, ಹೇಗೆ ಆಡುತ್ತಾರೆ ಎಂಬುದು ಮಹತ್ವ ಹೊಂದಿದೆ ಎಂದು ರಾಜಸ್ತಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯಾಟದ ಆರಂಭಕ್ಕೂ ಮುನ್ನ ಮಾದ್ಯಮದೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ರಾತ್ರಿ ನಡೆದ ರಾಜಸ್ತಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುಧ್ದದ ಪಂದ್ಯಾಟದಲ್ಲಿ ಅಂತಿಮವಾಗಿ ಪಂಜಾಬ್ ಕಿಂಗ್ಸ್ ಎರಡು ರನ್ ಗಳಿಂದ ಪರಾಜಯಗೊಂಡಿತ್ತು.



Join Whatsapp