Home ಟಾಪ್ ಸುದ್ದಿಗಳು ಗೋವಾದಲ್ಲಿ ಪ್ರವಾಸಿಗರು ಬೀಫ್ ತಿನ್ನುವುದಕ್ಕೆ ನಿಷೇಧ ಹೇರುವಂತೆ ಗೋರಕ್ಷಕ ಸಂಘಟನೆಯ ಒತ್ತಾಯ

ಗೋವಾದಲ್ಲಿ ಪ್ರವಾಸಿಗರು ಬೀಫ್ ತಿನ್ನುವುದಕ್ಕೆ ನಿಷೇಧ ಹೇರುವಂತೆ ಗೋರಕ್ಷಕ ಸಂಘಟನೆಯ ಒತ್ತಾಯ

ಪಣಜಿ : ಗೋವಾದಲ್ಲಿ ಪ್ರವಾಸಿಗರು ಬೀಫ್ ತಿನ್ನುವುದನ್ನು ನಿಷೇಧಿಸಬೇಕು ಎಂದು ಅಲ್ಲಿನ ಗೋರಕ್ಷಕ ಸಂಘಟನೆಯೊಂದು ಒತ್ತಾಯಿಸಿದೆ. ಗೋವಾ ಮೂಲದ ಗೋರಕ್ಷಕ ಸಂಘಟನೆ ಗೋವಂಶ ರಕ್ಷಾ ಅಭಿಯಾನ್ ಈ ಸಂಬಂಧ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗೆ ಮನವಿಯೊಂದನ್ನು ಸಲ್ಲಿಸಿದೆ.

ಗೋಹತ್ಯೆಯನ್ನು ತಡೆಯಲು ಕರ್ನಾಟಕದಲ್ಲಿ ಜಾರಿಗೊಳಿಸಿರುವಂತೆ ಗೋವಾದಲ್ಲೂ ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವಂತೆ ಸಂಘಟನೆ ಒತ್ತಾಯಿಸಿದೆ.

ಗೋವಾದ ಹೊರಗೆ, ಗೋವಾದ ಜನರು ಬೀಫ್ ಮಾತ್ರ ತಿನ್ನುತ್ತಾರೆ ಎಂಬಂತೆ ಬಿಂಬಿಸಲಾಗುತ್ತಿದೆ ಮತ್ತು ಬೀಫ್ ಸಿಗದಿದ್ದಲ್ಲಿ ಗೋವಾ ಜನರು ಹಸಿವಿನಿಂದ ಸಾಯುತ್ತಾರೆ ಎಂಬಂತೆ ಚಿತ್ರಿಸಲಾಗುತ್ತಿದೆ. ಇದು ತಪ್ಪು ಚಿತ್ರಣ. ಗೋವಾದ ಜನರು ಹಬ್ಬಗಳು ಮತ್ತು ಕೆಲವು ಸಂದರ್ಭಗಳಲ್ಲಿ ಮಾತ್ರ ಬೀಫ್ ತಿನ್ನುತ್ತಾರೆ ಎಂದು ಸಂಘಟನೆಯ ವಕ್ತಾರ ಕಮಲೇಶ್ ಬಂದೇಕರ್ ಹೇಳಿದ್ದಾರೆ.  

Join Whatsapp
Exit mobile version