Home ಟಾಪ್ ಸುದ್ದಿಗಳು ಆದಿತ್ಯನಾಥ್ ವಿರುದ್ಧ ಮಾತನಾಡಿದ್ದ ಮಾಜಿ ರಾಜ್ಯಪಾಲ ಅಝೀಝ್ ಖುರೇಷಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು!

ಆದಿತ್ಯನಾಥ್ ವಿರುದ್ಧ ಮಾತನಾಡಿದ್ದ ಮಾಜಿ ರಾಜ್ಯಪಾಲ ಅಝೀಝ್ ಖುರೇಷಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು!

ಉತ್ತರಪ್ರದೇಶ: ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಮಾತುಗಳನ್ನಾಡಿದ್ದ ಮಾಜಿ ರಾಜ್ಯಪಾಲ ಅಝೀಝ್ ಖುರೇಷಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 4ರಂದು ಅಝೀಝ್ ಖುರೇಷಿ ಸದ್ಯ ಜೈಲಿನಲ್ಲಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅಜಂ ಖಾನ್ರವರ ಪತ್ನಿ ತಂಝೀಮ್ ಫಾತಿಮಾರ ಬಳಿ ಮಾತುಕತೆ ನಡೆಸಿದ್ದರು. ಮನೆಯಿಂದ ಹೊರಡುವಾಗ ಮಾಧ್ಯಮಗಳ ಜತೆ ಮಾತನಾಡಿದ್ದ ಅವರು, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸಿದ್ದರು.

‘ಅಝಂ ಖಾನ್ಗೆ ಸರ್ಕಾರ ತುಂಬಾ ಹಿಂಸೆ ನೀಡುತ್ತಿದೆ. ನಾನೀಗ ಫಾತಿಮಾರಿಗೆ ಧೈರ್ಯ ತುಂಬಲು ಬಂದಿದ್ದೇನೆ. ನಾನು ಮತ್ತು ಜನರು ಆಕೆಯೊಂದಿಗೆ ಸದಾ ಇರುತ್ತೇವೆ. ಯೋಗಿ ಆದಿತ್ಯನಾಥ್ ಸರ್ಕಾರ ರಾಕ್ಷಸ ಸರ್ಕಾರ. ಜನರ ರಕ್ತ ಹೀರುವ ಪಿಶಾಚಿಗಳಂತೆ ಈ ಸರ್ಕಾರ ಇದೆ ಎಂದು ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಅಝೀಂ ಖಾನ್ ಮುಸ್ಲಿಂ ಸಮುದಾಯದ ಒಳಿತಿಗಾಗಿ ಕೆಲಸ ಮಾಡಿದ್ದರು. ಆದರೆ ಕೆಲವರಿಗೆ ನಮ್ಮ ಸಮುದಾಯ ಶಿಕ್ಷಣವಂತರಾಗುವುದು, ಸಮದಾಯದ ಒಳಿತು ಆಗುವುದು ಸಹ್ಯವಲ್ಲ’ ಎಂದು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. 81 ವರ್ಷದ ಅಝೀಜ್ ಖುರೇಷಿ ಮೂಲತಃ ಮಧ್ಯಪ್ರದೇಶದ ಭೋಪಾಲ್​​ನ ಹಿರಿಯ ಕಾಂಗ್ರೆಸ್​ ನಾಯಕ. ಅವರು ಉತ್ತರಾಖಂಡ, ಉತ್ತರಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

Join Whatsapp
Exit mobile version