Home ಟಾಪ್ ಸುದ್ದಿಗಳು ಬಜೆಟ್ ಮಂಡನೆ ವೇಳೆ ಭದ್ರತಾ ಲೋಪ: ಶಾಸಕರ ಕುರ್ಚಿಯಲ್ಲಿ ಅನಾಮಿಕ ವ್ಯಕ್ತಿ!

ಬಜೆಟ್ ಮಂಡನೆ ವೇಳೆ ಭದ್ರತಾ ಲೋಪ: ಶಾಸಕರ ಕುರ್ಚಿಯಲ್ಲಿ ಅನಾಮಿಕ ವ್ಯಕ್ತಿ!

ಬೆಂಗಳೂರು: ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಶುಕ್ರುವಾರ ಮಂಡಿಸಿದ್ದಾರೆ.


ಬಜೆಟ್ ಮಂಡನೆ ವೇಳೆ ವಿಧಾನಸಭೆಯಲ್ಲಿ‌ ಭದ್ರತಾ ಲೋಪವಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಇಂದು ವಿಧಾನಸಭೆ ಪ್ರವೇಶ ಮಾಡಿರುವ ಅನಾಮಿಕ ವ್ಯಕ್ತಿ ಸುಮಾರು ಹದಿನೈದು ನಿಮಿಷಗಳ ಕಾಲ ಸದನದಲ್ಲಿ ಕುಳಿತುಕೊಂಡಿದ್ದಾರೆ.


ದೇವದುರ್ಗ ಶಾಸಕಿ ಕರೆಯಮ್ಮ ಜಾಗದಲ್ಲಿ ಈ ಅನಾಮಿಕ ವ್ಯಕ್ತಿ ಕೂತಿದ್ದು, ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಸ್ಪೀಕರ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಒಬ್ಬ ವ್ಯಕ್ತಿ ಬಂದು ಸದನಲ್ಲಿ 15 ನಿಮಿಷ ಕುಳಿತಿದ್ದು, ಆತ ಮೊಳಕಾಲ್ಮೂರು ಶಾಸಕ ಎಂದು ಹೇಳಿಕೊಂಡಿದ್ದಾನೆ, ನಂತರ 15 ನಿಮಿಷದಲ್ಲಿ ಆತ ನಾಪತ್ತೆಯಾಗಿದ್ದಾನೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದ್ದಾರೆ. ಅದೃಷ್ಟವಶಾತ್ ಯಾವುದೇ ಘಟನೆ ನಡೆದಿಲ್ಲ.

Join Whatsapp
Exit mobile version