Home ಟಾಪ್ ಸುದ್ದಿಗಳು ಜ.31ರ ವರೆಗೆ ನೋಯ್ಡಾದಲ್ಲಿ ಸೆಕ್ಷನ್ 144 ಜಾರಿ : ಪ್ರತಿಭಟನೆಗೆ ಅವಕಾಶವಿಲ್ಲ

ಜ.31ರ ವರೆಗೆ ನೋಯ್ಡಾದಲ್ಲಿ ಸೆಕ್ಷನ್ 144 ಜಾರಿ : ಪ್ರತಿಭಟನೆಗೆ ಅವಕಾಶವಿಲ್ಲ

ನೋಯ್ಡಾ : ಗಣರಾಜ್ಯೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ಜ.31ರ ವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಜ.22ರಿಂದ ಜ.31ರ ವರೆಗೆ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ಈ ಆದೇಶ ಜಾರಿಯಲ್ಲಿರಲಿದೆ. ಯಾವುದೇ ವ್ಯಕ್ತಿ ಇದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಆಶುತೋಷ್ ದ್ವಿವೇದಿ ಹೇಳಿದ್ದಾರೆ.

ಈ ವೇಳೆ ಖಾಸಗಿ ಡ್ರೋಣ್ ಗಳನ್ನು ಬಳಸುವಂತಿಲ್ಲ. ಆಡಳಿತದ ಅನುಮತಿಯಿಲ್ಲದೆ ಪ್ರತಿಭಟನೆಗಳನ್ನು ನಡೆಸುವಂತಿಲ್ಲ. ಟ್ರಾಫಿಕ್ ಜಾಮ್ ಮಾಡುವಂತಿಲ್ಲ. ಹಾನಿಕಾರಕ ವಸ್ತುಗಳನ್ನು ಬಳಸುವಂತಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನಕ್ಕೆ ಅನುಮತಿ ಇಲ್ಲ ಎಂದು ಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.

ದೆಹಲಿಯಲ್ಲಿ ನಡೆಯುವ ರೈತರ ಪ್ರತಿಭಟನೆಗೆ ಜ.26ರಂದು ಹೆಚ್ಚು ಜನರು ಜಮಾವಣೆಯಾಗುವ ಸಾಧ್ಯತೆಯಿದೆ.

Join Whatsapp
Exit mobile version