ಬಳ್ಳಾರಿ: ಜಿಲ್ಲೆಯ ಕೊಳಗಲ್ ಗ್ರಾಮದಲ್ಲಿ ಎರ್ರಿತಾತ ಸ್ವಾಮಿಯ ಮೂರ್ತಿ ಕೂರಿಸುವ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ. ಇದರಿಂದ ಕೊಳಗಲ್ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ದೇವಸ್ಥಾನ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳು ಕೋರ್ಟ್ ಮೆಟ್ಟಿಲೇರಿದ್ದವು. ಕೋರ್ಟ್ ನಲ್ಲಿ ಸದ್ಯಕ್ಕೆ ದೇವಸ್ಥಾನದ ಗೋಪುರ ಹಾಗು ಕಾಂಪೌಂಡ್ ಕಟ್ಟಲು ಪರ್ಮಿಷನ್ ಸಿಕ್ಕಿತ್ತು. ಆದ್ರೆ ಗೋಪುರ ಕಟ್ಟಿ, ಇಂದು ನಸುಕಿನ ವೇಳೆ ದೇವಸ್ಥಾನದ ಒಳಗೆ ಒಂದು ಗುಂಪು ಮೂರ್ತಿ ಕೂರಿಸಿದೆ. ಈ ವಿಚಾರ ಗಲಾಟೆಗೆ ತಿರುಗಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.