Home ಕರಾವಳಿ SDPI ರಾಜ್ಯ ಸಮಿತಿ ಸದಸ್ಯರ ಮೇಲೆ 107 ಸೆಕ್ಷನ್: ದ.ಕ. ಎಸ್ಡಿಪಿಐ ಖಂಡನೆ

SDPI ರಾಜ್ಯ ಸಮಿತಿ ಸದಸ್ಯರ ಮೇಲೆ 107 ಸೆಕ್ಷನ್: ದ.ಕ. ಎಸ್ಡಿಪಿಐ ಖಂಡನೆ

ಮಂಗಳೂರು: ಭಜರಂಗದಳದ ಲೋಕ್ಲಾಸ್ ನಾಯಕೊಬ್ಬನ ಪ್ರಚೋದನಕಾರಿ ಹೇಳಿಕೆಗೆ ಉಡುಪಿಯಲ್ಲಿ ಮಾಧ್ಯಮದ ಮುಂದೆ ಉತ್ತರ ನೀಡಿದ SDPIಯ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಮೇಲೆ 107 ಸೆಕ್ಷನ್ ದಾಖಲಿಸಿದ್ದಕ್ಕೆ ಎಸ್ಡಿಪಿಐ ಆಕ್ಷೇಪ ವ್ಯಕ್ತಪಡಿಸಿದೆ. ಪೊಲೀಸ್ ಇಲಾಖೆ RSSನ ಮುಂದೆ ಬ್ಯಾಲೆನ್ಸಿಂಗ್ ಮಾಡಲು ಹೊರಟಿದೆಯಾ ಎಂದು SDPI ದ.ಕ. ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಪ್ರಶ್ನಿಸಿದ್ದಾರೆ.

ನಮಾಝ್ ವಿಚಾರವಾಗಿ RSSನ ಒತ್ತಡಕ್ಕೆ ಮಣಿದು ಮುಸ್ಲಿಮರ ವಿರುದ್ಧ ಸುಮೊಟೊ ಕೇಸ್ ದಾಖಲಿಸಿದ ನಂತರ ಸಾರ್ವಜನಿಕರಿಂದ ತೀವ್ರ ಸ್ವರೂಪದ ಆಕ್ಷೇಪ ಬಂದು ಅದನ್ನು ಹಿಂಪಡೆಯಲಾಯಿತು. ಆದರೆ ಇದೇ ವಿಚಾರಕ್ಕೆ SDPI ಮೇಲೆ 107 ಸೆಕ್ಷನ್ ದಾಖಲಿಸಿ RSSನ ಮುಂದೆ ಬ್ಯಾಲೆನ್ಸಿಂಗ್ ಮಾಡಲು ಹೊರಟಿದೆಯಾ? ಇದೇ ರೀತಿಯ 107 ಪ್ರಕರಣ ಕೋಮುವಿಷ ಭಾಷಣಕಾರರಾದ ಶರಣ್ ಪಂಪ್‌ವೆಲ್, ಕಲ್ಲಡ್ಕ ಭಟ್ಟನ ವಿರುದ್ಧ ಎಷ್ಟು ಸಲ ದಾಖಲು ಮಾಡಿದ್ದೀರಿ? ಸರ್ಕಾರ ಬದಲಾದರೂ ಬಿಜೆಪಿಯ ಆದೇಶವೇ ಮಂಗಳೂರಿನಲ್ಲಿ ಜಾರಿಯಾಗುತ್ತಾ ಇರುವುದು ಕರ್ನಾಡಕಕ್ಕೆ ನಾಚಿಗೇಡು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ಅಪರಾಹ್ನ 3:30 ಕ್ಕೆ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ:

ಮಂಗಳೂರಿನ ಮಸೀದಿಯ ಮುಂಭಾಗದಲ್ಲಿ ನಮಾಜು ನಿರ್ವಹಿಸಿದ ವಿಚಾರದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿ ಕೊಂಡಂತಹ ಪೊಲೀಸ್ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕು, ಸಮಾಜದಲ್ಲಿ ಗೊಂದಲ ಮೂಡಿಸುವಂತಹ ಸುದ್ದಿಗಳನ್ನು ಬಿತ್ತರಿಸಿ ಮುಸ್ಲಿಂ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ಕೆಲವೊಂದು ಮಾಧ್ಯಮಗಳ ವಿರುದ್ಧ, ಹಾಗೂ ಎಸ್ ಡಿ ಪಿ ನಾಯಕರ ಮೇಲೆ ಶಾಂತಿಭಂಗ ಪ್ರಕರಣ ದಾಖಲಿಸಿ ದಂತಹ ಪೊಲೀಸ್ ವ್ಯವಸ್ಥೆಯ ವಿರುದ್ಧ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಾಳೆ ದಿನಾಂಕ ಮೇ 31(ಶುಕ್ರವಾರ ) ರಂದು ಅಪರಾಹ್ನ 3:30 ಕ್ಕೆ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಎಲ್ಲಾ ಪತ್ರಕರ್ತ ಬಾಂಧವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇನೆ ಎಂದೂ ಅನ್ವರ್ ಸಾದತ್ ಗುರುವಾರ ಪ್ರಕಟನೆ ಹೊರಡಿಸಿದ್ದಾರೆ.

Join Whatsapp
Exit mobile version