Home ಟಾಪ್ ಸುದ್ದಿಗಳು ಬುರ್ಖಾ ಧರಿಸಿ ಲೇಡಿಸ್ ಟಾಯ್ಲೆಟ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಅಭಿಮನ್ಯು ಬಂಧನ​  

ಬುರ್ಖಾ ಧರಿಸಿ ಲೇಡಿಸ್ ಟಾಯ್ಲೆಟ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಅಭಿಮನ್ಯು ಬಂಧನ​  

ಕೊಚ್ಚಿ: ಬುರ್ಖಾ ಧರಿಸಿ ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಯುವಕನನ್ನು ಐಟಿ ಉದ್ಯೋಗಿ ಅಭಿಮನ್ಯು(23) ಎಂದು ಗುರುತಿಸಲಾಗಿದೆ.  

ಅಭಿಮನ್ಯು ಬುರ್ಖಾ ಧರಿಸಿ ಶೌಚಾಲಯಕ್ಕೆ ಪ್ರವೇಶಿಸಿ ಕೃತ್ಯ ಎಸಗಿರುವ ಬಗ್ಗೆ ವರದಿಯಾಗಿದೆ. ಕೇರಳದ ಕೊಚ್ಚಿಯಲ್ಲಿರುವ ಲುಲುಮಾಲ್​​ನಲ್ಲಿ ಈ ಘಟನೆ ನಡೆದಿದೆ. ಈ ಕುರಿತ ವೀಡಿಯೋ ವ್ಯಾಪಕ ವೈರಲ್ ಆಗಿದೆ.

ಆರೋಪಿ ಬಿಟೆಕ್ ಪದವೀಧರನಾಗಿದ್ದು, ಐಟಿ ಕಂಪನಿಯ ಉದ್ಯೋಗಿಯಾಗಿದ್ದಾನೆ. ಮಹಿಳೆಯ ಸೋಗಿನಲ್ಲಿ ಬುರ್ಖಾ ಧರಿಸಿ ಲುಲುಮಾಲ್​ಗೆ ಬಂದಿದ್ದ, ಈ ವೇಳೆ ಮಹಿಳೆಯರ ಶೌಚಾಯಲಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ.

ಆತ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹೊರಬಂದು ನಿಂತಿದ್ದ, ಸಿಬ್ಬಂದಿಗೆ ಅನುಮಾನ ಬಂದು ಮಾಲ್​ನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೊಚ್ಚಿ ಪೊಲೀಸರು ಅಭಿಮನ್ಯುವನ್ನು ಬಂಧಿಸಿದ್ದಾರೆ.

ಕೊಚ್ಚಿಯ ಪ್ರಸಿದ್ಧ ಮಾಲ್‌ನಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊಚ್ಚಿಯಲ್ಲಿ ಕೆಲಸ ಮಾಡುವ ರೊಬೊಟಿಕ್ಸ್ ಎಂಜಿನಿಯರಿಂಗ್ ಪದವೀಧರ ಅಭಿಮನ್ಯು ಮಹಿಳೆಯಂತೆ ಪೋಸ್ ನೀಡಲು ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ನಲ್ಲಿ ವೀಡಿಯೊಗಳನ್ನು ಚಿತ್ರೀಕರಿಸುವಾಗ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯ ನ್ಯಾಯಾಲಯ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪೊಲೀಸರು ಆರೋಪಿಯ ಫೋನ್ ಮತ್ತು ಅಪರಾಧ ಮಾಡಲು ಬಳಸಿದ ಬುರ್ಖಾವನ್ನು ವಶಪಡಿಸಿಕೊಂಡಿದ್ದಾರೆ, ಈ ವ್ಯಕ್ತಿ ಈ ಹಿಂದೆಯೂ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಅದನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Join Whatsapp
Exit mobile version