Home ಟಾಪ್ ಸುದ್ದಿಗಳು ಪಂಚಾಯತಿ ಕಟ್ಟಡವನ್ನೇ ಮಾರಾಟ ಮಾಡಿದ ಕಾರ್ಯದರ್ಶಿ !

ಪಂಚಾಯತಿ ಕಟ್ಟಡವನ್ನೇ ಮಾರಾಟ ಮಾಡಿದ ಕಾರ್ಯದರ್ಶಿ !

ಮುಜಾಫರ್ ​​​ಪುರ : ಕಾರ್ಯದರ್ಶಿಯೋರ್ವ ಪಂಚಾಯತಿ ಕಟ್ಟಡವನ್ನೆ ಮಾರಾಟ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಮುಜಾಫರ್‌ ಪುರದ ಔರೈ ಬ್ಲಾಕ್‌ ನಲ್ಲಿರುವ ಔರೈ ಪಂಚಾಯತಿ ಭವನವನ್ನು ಯಾವುದೇ ಸರ್ಕಾರಿ ಆದೇಶವಿಲ್ಲದೆ ಮಾರಾಟ ಮಾಡಲಾಗಿದೆ. ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿಯ ಕುಮ್ಮಕ್ಕಿನಿಂದ ಮಾರಾಟ ನಡೆದಿದೆ ಎನ್ನಲಾಗಿದೆ. ಕಟ್ಟಡವನ್ನು ಜೆಸಿಬಿಯಿಂದ ಕೆಡವಿ ಅದರಲ್ಲಿದ್ದ ಇಟ್ಟಿಗೆಗಳನ್ನ ಮಾರಾಟ ಮಾಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಂಚಾಯತ್​ ರಾಜ್​ ಇಲಾಖೆ ಆರೋಪಿತ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದೆ.

ಪಂಚಾಯತ್​ ಅಧಿಕಾರಿಗಳ ಈ ಕಳ್ಳಾಟ ಇದೀಗ ಬೆಳಕಿಗೆ ಬಂದಿದ್ದು, ಈ ಇಬ್ಬರ ಮೇಲೂ ಸರ್ಕಾರಿ ಆಸ್ತಿ ನಾಶ, ಹಣಕಾಸು ಅವ್ಯವಹಾರ ಹಾಗೂ ಹಿರಿಯ ಅಧಿಕಾರಿಗಳಿಂದ ಮಾಹಿತಿ ಮುಚ್ಚಿಟ್ಟ ಆರೋಪ ಹೊರಿಸಲಾಗಿದೆ.

Join Whatsapp
Exit mobile version