Home ಜಾಲತಾಣದಿಂದ ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರ ರಹಸ್ಯ ಸಭೆ:  ಸಭೆಯ ಉದ್ದೇಶ ಸಮುದಾಯದ ಸಮಸ್ಯೆಗೆ ಪರಿಹಾರವೋ, ಕಾಂಗ್ರೆಸ್...

ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರ ರಹಸ್ಯ ಸಭೆ:  ಸಭೆಯ ಉದ್ದೇಶ ಸಮುದಾಯದ ಸಮಸ್ಯೆಗೆ ಪರಿಹಾರವೋ, ಕಾಂಗ್ರೆಸ್ ನಾಯಕರ ಸಮಸ್ಯೆಗೆ ಪರಿಹಾರವೋ- ಅನ್ವರ್ ಸಾದಾತ್ ಪ್ರಶ್ನೆ

ಮಂಗಳೂರು: ಕಳೆದ ದಿನ ಮಂಗಳೂರಿನ ಪ್ರತಿಷ್ಠಿತ ಹೋಟೆಲೊಂದಲ್ಲಿ ಉದ್ಯಮಿ ಯೇನಪೋಯ ಅಬ್ದುಲ್ಲಾ ಕುಂಞಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರ ರಹಸ್ಯ ಸಭೆಯೊಂದು ನಡೆದಿದೆ. ಇದರ ಉದ್ದೇಶ ಸಮುದಾಯದ ಸಮಸ್ಯೆಗೆ ಪರಿಹಾರವೋ , ಕಾಂಗ್ರೆಸ್ ನಾಯಕರ ಸಮಸ್ಯೆಗೆ ಪರಿಹಾರವೋ, ಅಥವಾ ಯೇನಪೋಯ ಸಾಮ್ರಾಜ್ಯವನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶವೋ ಎಂದು ಎಸ್’ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪ್ರಶ್ನಿಸಿದ್ದಾರೆ.

ಹಿಜಾಬ್, ಹಲಾಲ್, ಗುಂಪು ಹಲ್ಲೆ, ಮುಸ್ಲಿಂ ಯುವಕರ ಬಂಧನ, ಯುಎಪಿಎ ಕೇಸು, ವ್ಯಾಪಾರ ಬಹಿಷ್ಕಾರದಂತಹ ಗಂಭೀರ ಸಮಸ್ಯೆಗಳಿಂದ ಮುಸ್ಲಿಂ ಸಮುದಾಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾಗ ಕಣ್ಣಿದ್ದೂ ಕುರುಡರಂತೆ ವರ್ತಿಸಿದ ಮಂಗಳೂರಿನ ಹೈಟೆಕ್ ಉದ್ಯಮಿಗಳು ಇದೀಗ ಚುನಾವಣಾ ಕಾಲಘಟ್ಟದಲ್ಲಿ ಕಾಂಗ್ರೆಸ್ ನಾಯಕರನ್ನು ಒಂದು ಗೂಡಿಸಿ ರಹಸ್ಯ ಸಭೆ ನಡೆಸಿ ಅದಕ್ಕೆ ಸಮುದಾಯ ನಾಯಕರ ಸಭೆ ಎಂಬ ಲೇಬಲ್ ಹಾಕಿ ‌ಸಮುದಾಯ ರಕ್ಷಣೆಗೆ ಹೊರಟ ಲಕ್ಷಣವೋ/ ಸ್ವ ಹಿತಾಸಕ್ತಿಯೋ/ಸಮುದಾಯದ ಮತವನ್ನು ಕಾಂಗ್ರೆಸ್’ನ ಪಾದಕ್ಕೆ ಅರ್ಪಿಸುವ ದುರಾಲೋಚನೆಯೋ…???ಉತ್ತರಕ್ಕಾಗಿ ಸಮುದಾಯ ಕಾಯುತ್ತಿದೆ…ಎಂದು ಅವರು ಫೇಸ್’ಬುಕ್ ಪೇಜ್ ನಲ್ಲಿ ಕುಟುಕಿದ್ದಾರೆ.

Join Whatsapp
Exit mobile version