Home ಟಾಪ್ ಸುದ್ದಿಗಳು ಇಂಡೋನೇಷ್ಯಾದಲ್ಲಿ ಎರಡನೆಯ ಭೂಕಂಪನ

ಇಂಡೋನೇಷ್ಯಾದಲ್ಲಿ ಎರಡನೆಯ ಭೂಕಂಪನ

ಜಕಾರ್ತ: ಇಂಡೋನೇಷ್ಯಾದ ಸುಲವೇಸಿಯಲ್ಲಿ 5.5 ತೀವ್ರತೆಯ ಎರಡನೆಯ ಭೂಕಂಪ ನಡೆದಿದೆ ಎಂದು ಇಎಂಎಸ್ ಸಿ- ಯೂರೋಪ್ ಮೆಡಿಟರೇನಿಯನ್ ಭೂಕಂಪ ಸೂಚನಾ ಕೇಂದ್ರ ತಿಳಿಸಿದೆ.
ಭಾನುವಾರ ರಾಜ್ ಕೋಟ್’ನಲ್ಲಿ ನಡೆದ ಭೂಕಂಪನದ ಕೇಂದ್ರ ಬಿಂದು 12 ಕಿಲೋಮೀಟರ್ ಆಳದಲ್ಲಿ ಇರುವುದಾಗಿಯೂ ಇಎಂಎಸ್ ಸಿ ಹೇಳಿದೆ.


ರವಿವಾರ ಸಂಜೆ ರಾಜ್ ಕೋಟ್ ನ ರಿಕ್ಟರ್ ಮಾಪಕದಲ್ಲಿ 4.3 ತೀವ್ರತಯ ಭೂಕಂಪನ ನಡೆದಿರುವ ಬಗ್ಗೆ ವರದಿಯಾಗಿದೆ. ಮಧ್ಯಾಹ್ನ 3.21 ಗಂಟೆಗೆ 10 ಕಿಮೀಗೂ ಹೆಚ್ಚು ಆಳದಲ್ಲಿ ರಾಜ್ ಕೋಟ್ ನ ವಾಯವ್ಯ ಪ್ರದೇಶದಲ್ಲಿ ಈ ಭೂಮಿ ಕಂಪಿಸಿದ್ದು, ಅದರ ಕೇಂದ್ರ ಬಿಂದುವು ಅಲ್ಲಿಂದ 270 ಕಿಲೋಮೀಟರ್ ದೂರದಲ್ಲಿತ್ತು.


ಪಾವುವಾ ನ್ಯೂ ಗಿನಿಯಾದಲ್ಲಿ ಭೂಕಂಪನ
ಪಾವುವಾ ನ್ಯೂ ಗಿನಿಯಾದ ಕಾಂಡ್ರಿಯನ್ ನಲ್ಲಿ ಶನಿವಾರ 6.2 ತೀವ್ರತೆಯ ಭೂಕಂಪನ ಆಗಿರುವುದಾಗಿ ಯುಎಸ್ ಜಿಎಸ್- ಅಮೆರಿಕ ಸಂಯುಕ್ತ ಸಂಸ್ಥಾನದ ಭೂಕಂಪನ ಸೂಚನಾ ಕೇಂದ್ರವು ತಿಳಿಸಿದೆ.
ಶನಿವಾರ ಪಾವುವಾ ನ್ಯೂ ಗಿನಿಯಾದ ಕಾಂಡ್ರಿಯನ್ ನಲ್ಲಿ 21 ಗಂಟೆ, 24 ನಿಮಿಷ, 48 ಸೆಕೆಂಡು ಕಾಲದಲ್ಲಿ ಈ ಭೂಕಂಪನ ಆಗಿರುವುದಾಗಿ ಯುಎಸ್ ಜಿಎಸ್ ತಿಳಿಸಿದೆ. ಅದರ ಕೇಂದ್ರ ಬಿಂದು 38.2 ಕಿಲೋಮೀಟರ್ ಆಳದಲ್ಲಿ ಇತ್ತು.


ಆ ಭೂಕಂಪದ ಎಪಿಕ್ ಸೆಂಟರ್ 6.111 ಡಿಗ್ರಿ ದಕ್ಷಿಣ ಮತ್ತು 149.793 ಡಿಗ್ರಿ ಪೂರ್ವಕ್ಕೆ ಇತ್ತು ಎಂದು ತಿಳಿದುಬಂದಿದೆ.

Join Whatsapp
Exit mobile version