Home ಟಾಪ್ ಸುದ್ದಿಗಳು ಎರಡನೇ ದಿ‌ನದ ವಿಚಾರಣೆ ಅಂತ್ಯ… ನಾಳೆಯೂ ರಾಹುಲ್ ವಿಚಾರಣೆ

ಎರಡನೇ ದಿ‌ನದ ವಿಚಾರಣೆ ಅಂತ್ಯ… ನಾಳೆಯೂ ರಾಹುಲ್ ವಿಚಾರಣೆ

ನವದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಎರಡನೇ ದಿನದ ವಿಚಾರಣೆ ಅಂತ್ಯವಾಗಿದ್ದು, ನಾಳೆಯೂ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.ಆದ್ದರಿಂದ ನಾಳೆಯೂ ವಿಚಾರಣೆ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.

ರಾಹುಲ್ ಗಾಂಧಿ ನಿನ್ನೆ ವಿಚಾರಣೆಗೆ ಹಾಜರಾಗಿದ್ದರು. ಸತತ 10 ಗಂಟೆಗೂ ಹೆಚ್ಚಿನ ಕಾಲ ಇಡಿ ಅಧಿಕಾರಿಗಳು ಅವರ ವಿಚಾರಣೆ ನಡೆಸಿದ್ದರು. ಇಂದೂ ಸಹ ರಾಹುಲ್ ವಿಚಾರಣೆಗೆ ಹಾಜರಾಗಿದ್ದು ಬೆಳಗ್ಗೆ 11 ಗಂಟೆಯಿಂದ ಸತತ 10 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ನಾಳೆಯೂ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ರಾಹುಲ್ ಇಡಿ ವಿಚಾರಣೆ ಖಂಡಿಸಿ ದೆಹಲಿ ಸೇರಿದಂತೆ ಹಲವೆಡೆ ಕೈ ನಾಯಕರು ಬೀದಿಗಿಳಿದಿದ್ದು ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version