Home ಟಾಪ್ ಸುದ್ದಿಗಳು ಸೀಟು ಬೆಲ್ಟ್ ಧರಿಸದ್ದಕ್ಕೆ ಬ್ರಿಟನ್ ಪ್ರಧಾನಿ ಸುನಕ್’ಗೆ ದಂಡ

ಸೀಟು ಬೆಲ್ಟ್ ಧರಿಸದ್ದಕ್ಕೆ ಬ್ರಿಟನ್ ಪ್ರಧಾನಿ ಸುನಕ್’ಗೆ ದಂಡ


ಲಂಡನ್: ಸಾಮಾಜಿ ಜಾಲ ತಾಣಕ್ಕೆ ಯಾವುದೋ ಕ್ಲಿಪ್ಪಿಂಗ್ ಶೂಟಿಂಗಿನಲ್ಲಿ ತೊಡಗಿದ್ದಾಗ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಬೆಲ್ಟ್ ಧರಿಸದೆ ಇದ್ದುದನ್ನು ಕಂಡ ಪೊಲೀಸರು ಅವರಿಗೆ ನಿನ್ನೆ ದಂಡ ವಿಧಿಸಿದ್ದಾರೆ.
ಉತ್ತರ ಇಂಗ್ಲೆಂಡಿನಲ್ಲಿ ಹೋಗುತ್ತ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಶೂಟಿಂಗ್ ನಡೆಸುತ್ತಿದ್ದೆ. ಆದ ತಪ್ಪಿಗೆ ಕ್ಷಮೆ ಕೋರುವುದಾಗಿ ಸುನಕ್ ತಮ್ಮ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.


ರಿಷಿ ಸುನಕ್ ಪೊಲೀಸರಿಂದ ದಂಡಕ್ಕೊಳಗಾಗುತ್ತಿರುವುದು ಇದು ಎರಡನೆಯ ಬಾರಿ. ಕಳೆದ ವರ್ಷ ಬೋರಿಸ್ ಜಾನ್ಸನ್ ಪ್ರಧಾನಿಯಾಗಿದ್ದ ಕಾಲದಲ್ಲಿ ಕೋವಿಡ್ ನಿಯಮಾವಳಿ ಮೀರಿದ್ದಕ್ಕೆ ರಿಷಿ ಸುನಕ್’ರಿಗೆ ಪೊಲೀಸರು ದಂಡ ಹಾಕಿದ್ದರು.
ಇತ್ತೀಚೆಗೆ ನಡೆದ ಎರಡೆರಡು ಅಭಿಪ್ರಾಯ ಸಮೀಕ್ಷೆಗಳಲ್ಲಿ ಸುನಕ್’ರ ಕನ್ಸರ್ವೇಟಿವ್ ಪಕ್ಷವು ವಿರೋಧಿ ಲೇಬರ್ ಪಕ್ಷಕ್ಕಿಂತ ಹಿಂದಿರುವ ಸಂದಿಗ್ಧ ಕಾಲದಲ್ಲಿ ಈ ದಂಡ ಬಿದ್ದಿರುವುದು ಪಕ್ಷದ ಹಲವರನ್ನು ಮುಜುಗರಕ್ಕೆ ದೂಡಿದೆ. 2025ರ ಜನವರಿಯಲ್ಲಿ ಬ್ರಿಟನ್ ಸಂಸತ್ತಿಗೆ ಚುನಾವಣೆ ನಡೆಯಲಿದೆ.


“ಪ್ರಧಾನಿ ಸುನಕ್’ ಇದೊಂದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಅವರು ನಿಶ್ಚಿತ ದಂಡವನ್ನೂ ಕಟ್ಟಿದ್ದಾರೆ” ಎಂದು ಡೌನಿಂಗ್ ಸ್ಟ್ರೀಟಿನ ಪ್ರಧಾನಿ ಕಚೇರಿಯ ವಕ್ತಾರ ಹೇಳಿಕೆ ನೀಡಿದ್ದಾರೆ.
ಉತ್ತರ ಇಗ್ಲೆಂಡಿನ ಲಾಂಕಾಶೈರ್ ಕೌಂಟಿಯ ಪೋಲೀಸರು ಈ ರೀತಿ ದಂಡ ವಿಧಿಸಿರುವುದನನ್ನು ದೃಢ ಪಡಿಸಿದ್ದಾರೆ.
ಬೋರಿಸ್ ಜಾನ್ಸನ್ ಕೆಳಗಿಳಿದ ಬಳಿಕ ಪ್ರಧಾನಿ ಆದವರಲ್ಲಿ ಸುನಕ್ ಎರಡನೆಯವರು.

Join Whatsapp
Exit mobile version