Home ಟಾಪ್ ಸುದ್ದಿಗಳು SDTU ವತಿಯಿಂದ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ಸರಕಾರದ ಪರಿಹಾರ ಧನ ಪಡೆಯಲು ಉಚಿತ ಅರ್ಜಿ...

SDTU ವತಿಯಿಂದ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ಸರಕಾರದ ಪರಿಹಾರ ಧನ ಪಡೆಯಲು ಉಚಿತ ಅರ್ಜಿ ಸಲ್ಲಿಕೆಗೆ ಚಾಲನೆ

ಫರಂಗಿಪೇಟೆ : ಕೋವಿಡ್ ಕಾರಣದಿಂದ ಆರ್ಥಿಕ ಸಂಕಷ್ಟ ಅನುಭವಿಸುವ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ಸರಕಾರ 3000 ಸಾವಿರ ಪರಿಹಾರ ಧನ ಘೋಷಣೆ ಮಾಡಿದ್ದು ಮೇ 27 ರಿಂದ ಸರಕಾರದ ಸೇವಾ ಸಿಂಧು ಪೋರ್ಟಲ್ ಆಪ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದೆ ಫಲಾನುಭವಿಗಳು ಉಚಿತವಾಗಿ ಅರ್ಜಿ ಸಲ್ಲಿಕೆಗೆ ಜಿಲ್ಲೆಯಲ್ಲಿರುವ ಮಾಹಿತಿ ಮತ್ತು ಸೇವಾ ಕೇಂದ್ರದಲ್ಲಿ ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ದಕ ಜಿಲ್ಲಾ ಸಮಿತಿ ವತಿಯಿಂದ ಅವಕಾಶ ಮಾಡಿಕೊಡಲಾಗಿದೆ ಇದರ ಚಾಲನೆ ಗುರುವಾರ ಫರಂಗಿಪೇಟೆ ಯಲ್ಲಿರುವ ಮಾಹಿತಿ ಮತ್ತು ಸೇವಾ ಕೇಂದ್ರದಲ್ಲಿ SDTU ದ.ಕ ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ನಡೆಸಿಕೊಟ್ಟರು.

ಪುದು ಗ್ರಾಮ ಪಂಚಾಯತ್ ಸದಸ್ಯ ನಝೀರ್ ಕುಂಜತ್ಕಳ, ಎಸ್ಡಿಪಿಐ ಮುಖಂಡರಾದ ಸುಲೈಮಾನ್ ಉಸ್ತಾದ್, ಇಕ್ಬಾಲ್ ಅಮೆಮ್ಮಾರ್, ಬಶೀರ್ ಅಮೆಮ್ಮಾರ್, ನವಾಝ್ ಬರ್ಕೆ, ಶೆರೀಫ್, ಎಸ್ಡಿಟಿಯು ಆಟೋ ಚಾಲಕರ ಯೂನಿಯನ್ ಮುಖಂಡರಾದ ಮರ್ಝುಕು ಹನೀಫ್, ಹಂಝ ಬಡ್ದುರು, ಅಶ್ರಫ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Join Whatsapp
Exit mobile version