SDTU ಕರ್ನಾಟಕ ರಾಜ್ಯ ನೂತನ ಕಛೇರಿ ಉದ್ಘಾಟನೆ

Prasthutha|

ಬೆಂಗಳೂರು : ಜೆಸಿ ನಗರದ ಮಠದ ಹಳ್ಳಿ ಬೆಂಗಳೂರಿನಲ್ಲಿ  ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್ಡಿಟಿಯು) ಇದರ ನೂತನ ರಾಜ್ಯ ಕಚೇರಿ ಇತ್ತೀಚಿಗೆ  ಉದ್ಘಾಟನೆಗೊಂಡಿತು. ಎಸ್ಡಿಟಿಯು ರಾಜ್ಯಾಧ್ಯಕ್ಷ ಅಬ್ದುಲ್ ರಹೀಮ್ ಪಠೇಲ್ ನೂತನ ಕಛೇರಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಅಸಂಘಟಿತ ವಲಯದ 94% ಕಾರ್ಮಿಕರ ಏಳಿಗೆಗೆ ಶ್ರಮಿಸಲು ಸಂಘಟನೆಯನ್ನು ಬಲಪಡಿಸಲಾಗುವುದು. ಅಸಂಘಟಿತ ವಲಯದ ಕಾರ್ಮಿಕರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು, ಇವರ ಶ್ರೇಯೋಭಿವೃದ್ದಿಗಾಗಿ ಕಾರ್ಯಯೋಜನೆಯನ್ನು ಸಿದ್ದಪಡಿಸಿ ಸರಕಾರದ ಗಮನಕ್ಕೆ ತರಲು ಹೋರಾಟ ರೂಪಿಸುವುದಾಗಿ ತಿಳಿಸಿದರು.

- Advertisement -

ಎಸ್ಡಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಫಯಾಝ್ ದೊಡ್ಡಮನೆ ಮಾತನಾಡಿ ರಾಜ್ಯದಲ್ಲಿರುವ ಇತರ ಸಂಘಟನೆಗಳು ಕಾರ್ಮಿಕರ ಹಿತಕಾಯುವಲ್ಲಿ ವಿಫಲವಾಗಿದ್ದು, ಸಾಕಷ್ಟು ಕಾರ್ಮಿಕ ವಲಯದ ಜನರು ಸರಕಾರದ ಸವಲತ್ತನ್ನು ಪಡೆಯಲು ಮಾಹಿತಿ ಕೊರತೆಯಿಂದ ವಿಫಲವಾಗಿರುವುದನ್ನು ಮನಗಂಡು, ಕೆಳವರ್ಗದ ಸಮುದಾಯಗಳೊಂದಿಗೆ ಸಂಘಟನೆಯನ್ನು ಸಮರೋಪಾದಿಯಲ್ಲಿ ಸಂಘಟಿಸುವುದಾಗಿ ಹೇಳಿದರು.

ಎಸ್ಡಿಟಿಯು ರಾಜ್ಯ ಉಪಾಧ್ಯಕ್ಷ ಫಝಲುಲ್ಲಾ ಮಡಿಕೇರಿ,  ಕಾರ್ಯದರ್ಶಿ ಶರೀಫ್ ಪಾಂಡೇಶ್ವರ್, ಕೋಶಾಧಿಕಾರಿ ರಹಮತ್ತುಲ್ಲಾ ಬೆಂಗಳೂರು, ರಾಜ್ಯ ಸಮಿತಿ ಸದಸ್ಯರಾದ ರಮೇಶ್ ಕುಮಾರ್, ಸಿದ್ದೀಕ್ ಆನೆಮಹಲ್, ಮತ್ತು ರಾಜ್ಯದ ಹಲವು ಜಿಲ್ಲೆಗಳಿಂದ ಜಿಲಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Join Whatsapp