Home ಕರಾವಳಿ ಬೆಳ್ತಂಗಡಿ, ಆಟೋ ರಿಕ್ಷಾ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ: SDTU ಖಂಡನೆ

ಬೆಳ್ತಂಗಡಿ, ಆಟೋ ರಿಕ್ಷಾ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ: SDTU ಖಂಡನೆ

ಬೆಳ್ತಂಗಡಿ: ಬೆಳ್ತಂಗಡಿಯ ಕಳಿಯ ಗ್ರಾಮದ ಗೋವಿಂದೂರು ಎಂಬಲ್ಲಿ ರಿಕ್ಷಾ ಚಾಲಕ ಮತ್ತು ಆತನ ಸಹೋದರನ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಎಸ್ ಡಿಟಿಯು ಆಟೋ ಚಾಲಕರ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ಖಂಡಿಸಿದೆ.


ತ್ರಿಶೂಲ ದೀಕ್ಷೆ, ದ್ವೇಷ ಬಾಷಣದಿಂದ ಪ್ರೇರಿತವಾದ ದುಷ್ಕರ್ಮಿಗಳು ತ್ರಿಶೂಲದಂತಹ ಮಾರಕಾಸ್ತ್ರವನ್ನು ಕೈಯಲ್ಲಿ ಇಟ್ಟು ಜಿಲ್ಲೆಯ ವಿವಿಧ ಕಡೆ ಅನೈತಿಕ ಪೋಲಿಸ್ ಗಿರಿ ಹಲ್ಲೆ, ಇರಿತದಂತಹ ದುಷ್ಕೃತ್ಯ ನಡೆಸುತ್ತಿದ್ದು ಪೋಲಿಸ್ ಇಲಾಖೆ ಇಂತಹ ಪುಂಡಾಟಿಕೆ ನಡೆಸುತ್ತಿರುವ ದುಷ್ಕರ್ಮಿಗಳನ್ನು ಹೆಡೆಮುರಿ ಕಟ್ಟಿ ಜಿಲ್ಲೆಯ ಶಾಂತಿ ಸಾಮರಸ್ಯವನ್ನು ಕಾಪಾಡಬೇಕಾಗಿದೆ ಎಂದು ಎಸ್ ಡಿಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ ನವಾಝ್ ಜಿಕೆ ಆಗ್ರಹಿಸಿದ್ದಾರೆ.


ದಿನನಿತ್ಯ ಶ್ರಮ ವಹಿಸಿ ದುಡಿಯುವ ಶ್ರಮಿಕ ವರ್ಗವನ್ನು ಬಿಡದೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮದಿಂದ ಹಲ್ಲೆಗೊಳಗಾದ ಸಹೋದರರಿಬ್ಬರು ತೀವ್ರ ರೀತಿಯ ಗಾಯಗಳಾಗಿ ನಗರದ ಖಾಸಾಗಿ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಬೆಳ್ತಂಗಡಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕ್ಷಿಪ್ರ ಕಾರ್ಯಾರಣೆ ನಡೆಸಿ ಆರೋಪಿಗಳನ್ನು ಬಂದಿಸಿದ್ದನ್ನು ಯೂನಿಯನ್ ಶ್ಲಾಘಿಸುತ್ತದೆ. ಪೋಲಿಸ್ ಇಲಾಖೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಹಲ್ಲೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp
Exit mobile version