ಬಂಟ್ವಾಳ: ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಬಂಟ್ವಾಳ ತಾಲೂಕು ಸಮಿತಿ ನೂತನ ಅಧ್ಯಕ್ಷರಾಗಿ ಆಶಿಕ್ ಟಿಪ್ಪು ನಗರ, ಉಪಾಧ್ಯಕ್ಷರಾಗಿ ಅಲ್ತಾಫ್ ತುಂಬೆ, ಕಾರ್ಯದರ್ಶಿಯಾಗಿ ಖಾದರ್ ಅಲಂಪಾಡಿ, ಜೊತೆ ಕಾರ್ಯದರ್ಶಿಯಾಗಿ ಹುಸೈನಬ್ಬ ಕುಮೇರ್ ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಅಝೀಝ್ ರಾಮಲ್ ಕಟ್ಟೆ ಸದಸ್ಯರಾಗಿ ಮೊಹಮ್ಮದ್ ಅಶ್ರಫ್ ಅಲಿ ಪಾರ್ಲಿಯಾ ಹಕೀಮ್ ತುಂಬೆ, ಇಮ್ತಿಯಾಝ್ ಬಾಂಬಿಲ, ಇಸಾಕ್ ಕಲ್ಲಡ್ಕ, ಆಶಿಕ್ ಸಾಲೆತ್ತೂರು, ರಶೀದ್ ನಂದರ ಬೆಟ್ಟು, ಇಸ್ಮಾಯಿಲ್ ಪೊನ್ನೋಡಿ ಆಯ್ಕೆ ನಡೆಸಲಾಯಿತು.
ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದ SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆಯವರು ಈ ಸಂದರ್ಭದಲ್ಲಿ ಮಾತನಾಡಿ ಕಾರ್ಮಿಕರನ್ನು ಸಂಘಟಿಸಿ ಅವರ ಶ್ರೇಯೋಭಿವೃದ್ಧಿಗಾಗಿ ಸರಕಾರ ಮತ್ತು ಕಾರ್ಮಿಕರ ನಡುವೆ ಒಂದು ಸೇತುವೆಯಾಗಿ SDTU ಕಾರ್ಯನಿರ್ವಹಿಸಲಿದೆ ಈ ನಿಟ್ಟಿನಲ್ಲಿ ಕಾರ್ಮಿಕರ ಹಕ್ಕು ಮತ್ತು ಅವಕಾಶಗಳನ್ನು ಪಡೆಯಲು ಯೂನಿಯನ್ ಸಕ್ರೀಯವಾಗಿರಬೇಕು ಎಂದರು.
ಖಾದರ್ ಅಲಂಪಾಡಿ