Home ಟಾಪ್ ಸುದ್ದಿಗಳು ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ರಚನೆ SDPI ಸ್ವಾಗತ

ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ರಚನೆ SDPI ಸ್ವಾಗತ

ಮಂಗಳೂರು: ರಾಜ್ಯ ಗೃಹ ಸಚಿವರಾದ ಡಾಕ್ಟರ್ ಪರಮೇಶ್ವರ್ ರವರು ಇತ್ತೀಚೆಗೆ ಘೋಷಿಸಿದಂತೆ ಮಂಗಳೂರಿನಲ್ಲಿ ನಡೆಯುತ್ತಿರುವ ಅನೈತಿಕ ಪೋಲಿಸ್ ಗಿರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಮೀಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ನೇಮಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಇಂದು ಅದೇಶ ಹೊರಡಿಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸ್ವಾಗತಿಸುತ್ತಿದೆ ಎಂದು SDPI ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಫ್ಯಾಸಿಸ್ಟ್ ಶಕ್ತಿಗಳು ನಿರಂತರವಾಗಿ ನಡೆಸುತ್ತಿರುವ ಅನೈತಿಕ ಪೊಲೀಸ್ ಗಿರಿಯು ಎಜುಕೇಶನ್ ಹಬ್ ಎಂದು ಗುರುತಿಸಿ ಕೊಂಡ ಮಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಸಲ ಕಳಂಕವನ್ನು ಉಂಟುಮಾಡಿ , ಅಭಿವೃದ್ಧಿಗೆ ತೊಡಕಾಗಿದ್ದು ಅಲ್ಲದೆ ,ಕೊಮುಗಲಭೆಗಳನ್ನು ಸ್ರಷ್ಟಿಸಿ ಜನರ ನೆಮ್ಮದಿಯ ಬದುಕಿಗೆ ಮಾರಕವಾಗಿದೆ . ಜಿಲ್ಲೆಯಲ್ಲಿ ಅರಾಜಕತೆ ಉಂಟುಮಾಡುವ ಸಂವಿಧಾನ ವಿರೋಧಿ ಶಕ್ತಿಗಳನ್ನು ಹೆಡೆಮುರಿ ಕಟ್ಟುವಂತೆ SDPI ಹಲವಾರು ವರ್ಷಗಳಿಂದ ಹೋರಾಟ ಗಳನ್ನು ಹಮ್ಮಿಕೊಂಡು ಈ ವಿಚಾರದಲ್ಲಿ ಹಲವಾರು ಮನವಿಗಳನ್ನು ಸರಕಾರಕ್ಕೆ ಸಲ್ಲಿಸಿದೆ , ಇದೀಗ ಕೊನೆಗೂ ಸರಕಾರ ಎಚ್ಚೆತ್ತುಕೊಂಡು ಕಮ್ಯುನಲ್ ಗೂಂಡಾಗಳನ್ನು ನಿಗ್ರಹಿಸಲು ಹೊಸ ವಿಂಗ್ ರಚಿಸಿರುವ ವಿಚಾರ ಅಭಿನಂದನಾರ್ಹ ವಾಗಿದೆ. ಆದರೆ ಈ ತಂಡದ ಘೋಷಣೆ ಕೇವಲ ಸಾಂಕೇತಿಕವಾಗಿ ಆಗಿರದೆ ಜಿಲ್ಲೆಯಲ್ಲಿ ಆಳವಾಗಿ ಬೇರೂರಿರುವ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದರೆ ಇದಕ್ಕೆ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸಿಪಿ, ಡಿವೈಎಸ್ಪಿ ,ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಿಗಳ ಬದಲಿಗೆ ದಕ್ಷ ಪ್ರೊಫೆಷನರಿ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಬೇಕು ಎಂಬುದು SDPI ಆಗ್ರಹವಾಗಿದೆ.

ವಿಧ್ಯಾವಂತರ ಜಿಲ್ಲೆಯೆಂದು ಪ್ರಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಮುದಾಯವನ್ನು ಮಾತ್ರ ಗುರಿಪಡಿಸಿ ಕೋಮುವಾದಿ ಶಕ್ತಿಗಳು ನಡೆಸುವ ಗಲಭೆ,ಹಲ್ಲೆ, ಕೊಲೆಗಳಿಗೆ ‌‌ಸಂತ್ರಸ್ತರಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ಸಿಗದೆ ,ಅಭದ್ರತೆ ಮತ್ತು ಭಯದ ವಾತಾವರಣದಲ್ಲಿ ಬದುಕುತ್ತಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸರಕಾರ ಮತ್ತು ಪೊಲೀಸ್ ಇಲಾಖೆ ಆತ್ಮವಿಶ್ವಾಸ ನೀಡುವ ಕೆಲಸ ಮಾಡಬೇಕು, ತನ್ನ ಚೇಲಾಗಳು ನಡೆಸಿದ ಕೊಲೆಗಳನ್ನು ಬಹಿರಂಗವಾಗಿ ಸಮರ್ಥಿಸುವ ಸಂಘಪರಿವಾರದ ನಾಯಕರ ವಿರುದ್ಧ ದೂರು ನೀಡಿ ಎಫ್ಐಆರ್ ದಾಖಲಾದರೂ ಆತನ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿರುವುದು ಬಹಳ ಅಪಾಯಕಾರಿ ಆಗಿದೆ. ಅದೇರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಾರ್ವಜನಿಕ ಸಾರಿಗೆ ಕ್ಷೇತ್ರವಾದ ಖಾಸಗೀ ಬಸ್ ಚಾಲಕರು ಮತ್ತು ನಿರ್ವಾಹಕರು ಸಂಘಪರಿವಾರದ ಸದಸ್ಯರೊಂದಿಗೆ ಸೇರಿಕೊಂಡು ಗೂಂಡಾಗಿರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಇಂತಹ ಚಾಲಕರು ಮತ್ತು ನಿರ್ವಾಹಕರ ಮೇಲೆ ಆ್ಯಂಟಿವಿಂಗ್ ವಿಶೇಷ ನಿಗಾ ವಹಿಸಬೇಕು , ಇದರಲ್ಲಿ ಇವರ ಕೈವಾಡ ಕಂಡುಬಂದಲ್ಲಿ ಅದರ ಕಂಡಕ್ಟರ್ ಮತ್ತು ಚಾಲಕರಿಗೆ ಸರಕಾರವು ನೀಡಿದ ಪರವಾನಿಗೆ ರದ್ದು ಪಡಿಸಿ ಆತನನ್ನು ಪ್ರಮುಖ ಅರೋಪಿಯನ್ನಾಗಿಸಿ ಬಂಧಿಸಬೇಕು, ಕಳೆದ ಹಲವು ವರ್ಷಗಳಿಂದ ನಡೆದ,ದ್ವೇಷ ಭಾಷಣ, ಅನೈತಿಕ ಪೊಲೀಸ್ ಗಿರಿಯ ಎಲ್ಲಾ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಿ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು ಇದಕ್ಕಾಗಿ ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ಸಮರ್ಥ ತನಿಖಾ ತಂಡಗಳನ್ನು ರಚಿಸಿ ಮುಕ್ತವಾಗಿ ತನಿಖೆ ನಡೆಸಬೇಕು, ಅಪರಾಧಿಗಳು ಎಷ್ಟೇ ಪ್ರಭಾವಿಗಳು ಆದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರಗಿಸಿದರೆ ಮಾತ್ರ ಜಿಲ್ಲೆಯಲ್ಲಿ ಶಾಶ್ವತವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾದ್ಯ ಎಂಬುದನ್ನು ಸರಕಾರವು ಮನವರಿಕೆ ಮಾಡಿ ಸೂಕ್ತ ಮತ್ತು ದ್ರಡ ಹೆಜ್ಜೆ ಇಟ್ಟು ಜನ ಸಾಮಾನ್ಯರಲ್ಲಿ ಸರಕಾರದ ಬಗ್ಗೆ ಭರವಸೆ ಮೂಡಿಸಬೇಕು,ಆ್ಯಂಟಿ ಕಮ್ಯುನಲ್ ವಿಂಗ್ ಕೇವಲ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಸೀಮಿತ ಗೊಳಿಸದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವ್ಯಾಪ್ತಿಗೆ ಬರುವಂತಹ ಜಿಲ್ಲೆಯ ಎಲ್ಲಾ ಪ್ರಧೇಶಗಳಲ್ಲು ನೇಮಿಸಬೇಕು ಎಂದು ಅನ್ವರ್ ಸಾದತ್ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ

Join Whatsapp
Exit mobile version