Home ಟಾಪ್ ಸುದ್ದಿಗಳು ಎಸ್‌.ಡಿ.ಪಿ.ಐ ಉಳ್ಳಾಲ ನಗರ ಸಮಿತಿ ಬ್ಲಾಕ್ ಸಮಾಗಮ – 2023

ಎಸ್‌.ಡಿ.ಪಿ.ಐ ಉಳ್ಳಾಲ ನಗರ ಸಮಿತಿ ಬ್ಲಾಕ್ ಸಮಾಗಮ – 2023

ಉಳ್ಳಾಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ಕೈಗೊಂಡ ಅಭಿಯಾನದ ಭಾಗವಾದ ಬ್ಲಾಕ್ ಸಮಾಗಮದ ಅಂಗವಾಗಿ ಎಸ್.ಡಿ.ಪಿ.ಐ. ಉಳ್ಳಾಲ ನಗರ ಸಮಿತಿಯ ಅಧೀನದಲ್ಲಿ ಬ್ಲಾಕ್ ಸಮಾಗಮ – 2023 ಕಾರ್ಯಕ್ರಮವು ಎಸ್.ಡಿ.ಪಿ.ಐ. ಉಳ್ಳಾಲ ನಗರ ಸಮಿತಿ ಅಧ್ಯಕ್ಷರಾದ ಅಬ್ಬಾಸ್. A.R. ಅಧ್ಯಕ್ಷತೆಯಲ್ಲಿ ಎಸ್.ಡಿ.ಪಿ.ಐ. ಉಳ್ಳಾಲ ನಗರ ಸಮಿತಿ ಕಛೇರಿಯಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಎಸ್‌.ಡಿ.ಪಿ.ಐ. ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜಮಾಲ್ ಜೋಕಟ್ಟೆ, ಎಸ್.ಡಿ.ಪಿ.ಐ. ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ನವಾಝ್ ಉಳ್ಳಾಲ್ ಆಗಮಿಸಿದ್ದರು.

ಎಸ್.ಡಿ.ಪಿ.ಐ. ರಾಜ್ಯ ಸಮಿತಿ ಸದಸ್ಯರಾದ ನವಾಝ್ ಉಳ್ಳಾಲ್ ಪ್ರಸ್ತಾವಿಕ ಮಾತನಾಡಿದರು.

ಸಭೆಯನ್ನು ಉದ್ದೇಶಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಮಾಲ್ ಜೋಕಟ್ಟೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಪಕ್ಷದ ಕಾರ್ಯಕರ್ತರುಗಳು ಮತ್ತು ಸ್ಥಳೀಯ ನಾಯಕರುಗಳ ಸಂಘಟಿತ ಚಟುವಟಿಕೆಗಳು ಮತ್ತು ಮುಂದಿನ ದಿನಗಳಲ್ಲಿ ತಳಮಟ್ಟದಲ್ಲಿ ಪಕ್ಷ ಬೆಳವಣಿಗೆ ನಡೆಸಿ ಉತ್ತಮ ನಾಯಕರನ್ನು ಸೃಷ್ಟಿ ಮಾಡಲು ಬೇಕಾಗಿರುವ ಅಂಶಗಳ ಕುರಿತು ಮಾತನಾಡಿದರು.

ಪಕ್ಷದ ಮುಂದಿನ ರೂಪುರೇಷೆಗಳು ಉಸ್ತುವಾರಿಗಳ ಜವಾಬ್ದಾರಿ ಮತ್ತು ತಯಾರಿ ಬಗ್ಗೆ ಎಸ್.ಡಿ.ಪಿ.ಐ. ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‌.ಡಿ.ಪಿ.ಐ ಉಳ್ಳಾಲ ನಗರ ಸಮಿತಿ ಕಾರ್ಯದರ್ಶಿಯಾದ ಜಮಾಲ್ ಕಡಪರ, ಜೊತೆ ಕಾರ್ಯದರ್ಶಿ ಶಮೀರ್ ಝುಭೈರ್, ಕೋಶಾಧಿಕಾರಿ ಇಮ್ತಿಯಾಝ್ ಮುಕ್ಕಚ್ಚೇರಿ, ಕೌನ್ಸಿಲರ್ ಗಳಾದ, ರಮೀಝ್ ಕೋಡಿ, ಅಝ್ಗರ್ ಆಲಿ ಪಕ್ಷದ ಮುಖಂಡರುಗಳಾದ, ಅಬುಬಕ್ಕರ್ ಉಳ್ಳಾಲ, ಅಬ್ದುಲ್ ರವೂಫ್ ಹಳೆಕೋಟೆ, ಇಕ್ಬಾಲ್ ಕೋಟೇಪುರ, ನಿಝಾಮ್ ಮೇಲಂಗಡಿ, ಎಸ್.ಡಿ.ಪಿ.ಐ. ಉಳ್ಳಾಲ ನಗರ ಸಮಿತಿ ಸದಸ್ಯರು ಹಾಗೂ ಎಲ್ಲಾ ಬ್ರಾಂಚ್ ನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಎಸ್.ಡಿ.ಪಿ.ಉಳ್ಳಾಲ ನಗರ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಎ.ಆರ್. ಸ್ವಾಗತಿಸಿ, ರವೂಫ್ ಹಳೆಕೋಟೆ ಧನ್ಯವಾದಗೈದರು.

Join Whatsapp
Exit mobile version