Home ಕರಾವಳಿ ನಿರ್ಗತಿಕ ಕುಟುಂಬಕ್ಕೆ ನೆರವಾದ SDPI; ನಾಲ್ಕು ತಿಂಗಳ ಭತ್ಯೆ ಸಮರ್ಪಣೆ

ನಿರ್ಗತಿಕ ಕುಟುಂಬಕ್ಕೆ ನೆರವಾದ SDPI; ನಾಲ್ಕು ತಿಂಗಳ ಭತ್ಯೆ ಸಮರ್ಪಣೆ

ಬೆಳಪು : ಇಲ್ಲಿನ ನಿವಾಸಿಯಾದ ಗುರುರಾಜ್ ಆಚಾರ್ಯ ಹಲವಾರು ವರ್ಷಗಳಿಂದ ಇಲ್ಲಿನ ಜನತಾ ಕಾಲೋನಿ ಬಳಿಯ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದು ತನ್ನ ದಿನನಿತ್ಯ ಜೀವನ ನಡೆಸಲು ದನವನ್ನು ಸಾಕಿ ಹಾಲು ಮಾರಾಟ ಮಾಡಿ ಅದರಿಂದ ಬರುವ ಆದಾಯದಿಂದ ಕುಟುಂಬ ನಿರ್ವಹಿಸುತ್ತಿದ್ದಾರೆ.

ಸುಮಾರು 65 ವಯಸ್ಸಿನ ಗುರುರಾಜ್ ಆಚಾರ್ಯರಿಗೆ ಸಹಾಯಕ್ಕಾಗಿ ಮಕ್ಕಳಿಲ್ಲ. ತನ್ನ ಆದಾಯದ ಮೂಲ ದನಗಳ ಗೊಬ್ಬರ ಹಾಕುವ ಗುಂಡಿ ಸರಿ ಇಲ್ಲದ ಕಾರಣ ಪಂಚಾಯತಿಗೆ ಮನವಿ ಮಾಡಲಾಗಿತ್ತಾದರೂ ಸರಿಯಾದ ಮನೆಯ ದಾಖಲೆಗಳು ಇರದ ಕಾರಣ ನಿರಾಕರಿಸಲಾಗಿತ್ತು. ಇವರ ಬಡತನದ ಜೀವನದ ಸ್ಥಿತಿಯನ್ನು ಅರಿತ ಎಸ್ಡಿಪಿಐ ಬೆಂಬಲಿತ ಬೆಳಪು ಗ್ರಾ.ಪಂ ಸದಸ್ಯ ಸಮಾಜ ಸೇವಕ ಫಹಿಮ್ ಬೆಳಪು ಪಂಚಾಯಿತಿಯಿಂದ ಬರುವ ತನ್ನ ನಾಲ್ಕು ತಿಂಗಳ ಭತ್ಯೆಯನ್ನು ತನ್ನ ವಾರ್ಡಿನ ನಿವಾಸಿ ಗುರುರಾಜ್ ಆಚಾರ್ಯ ಅವರಿಗೆ ಗೊಬ್ಬರ ಗುಂಡಿ  ದುರಸ್ತಿ ಮಾಡಲು ನೀಡಿದರು. ಇದೇ ಸಂದರ್ಭದಲ್ಲಿ ಎಸ್ಡಿಪಿಐ ಬೆಳಪು ಗ್ರಾಮ ಸಮಿತಿ ವತಿಯಿಂದ, ದಾನಿಗಳ ನೆರವಿನಿಂದ ಗೊಬ್ಬರ ಗುಂಡಿ ದುರಸ್ತಿ ಮಾಡಲು ಅಗತ್ಯ ಕಾಮಗಾರಿಯ ವಸ್ತುಗಳನ್ನು ನೀಡಲು ತೀರ್ಮಾನಿಸಲಾಯಿತು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಆದರ್ಶವನ್ನು ಮಾದರಿಯಾಗಿರಿಸಿಕೊಂಡ ಫಹಿಮ್ ಬೆಳಪು ಇತ್ತೀಚೆಗೆ ಬೆಂಕಿ‌ ಅನಾಹುತದಲ್ಲಿ ತಾನೇ ರಕ್ಷಣಾ ಕಾರ್ಯಾಚರಣೆಗೆ ತೆರಳಿ ಅಲ್ಲಿ ನಡೆದ ಒಂದು ಅನಾಹುತದಲ್ಲಿ ತನ್ನ ಒಂದು ಕಣ್ಣನ್ನು ಕಳೆದುಕೊಂಡು, ಇನ್ನು ಸರಿಯಾಗಿ ಚೇತರಿಸಿಕೊಳ್ಳದೆ ಇರುವ ಈ ಸಂದರ್ಭದಲ್ಲಿ  ತನ್ನ ವಾರ್ಡಿನ ಜನರ ಕಷ್ಟಕ್ಕೆ ನೆರವಾಗುವ ಅವರ ಗುಣಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್ಡಿಪಿಐ ಗ್ರಾಮ ಸಮಿತಿ ಅಧ್ಯಕ್ಷರಾದ ಮೊಯಿನುದ್ದೀನ್ ಬೆಳಪು, ಗ್ರಾಮ ಸಮಿತಿ ಸದಸ್ಯರಾದ ಸಿದ್ದಿಕ್ ಬೆಳಪು , ಜಮೀರ್ ಬೆಳಪು , ಸಲೀಂ ಅಶ್ಪಾಕ್ ಉಪಸ್ಥಿತರಿದ್ದರು.

Join Whatsapp
Exit mobile version