Home ಟಾಪ್ ಸುದ್ದಿಗಳು ಎಸ್‌ ಡಿಪಿಐ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಕೊಟ್ಯಾಡಿಯಲ್ಲಿ ಸ್ನೇಹ ಸಮ್ಮಿಲನ ಹಾಗೂ ಕ್ರೀಡಾಕೂಟ ಕಾರ್ಯಕ್ರಮ

ಎಸ್‌ ಡಿಪಿಐ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಕೊಟ್ಯಾಡಿಯಲ್ಲಿ ಸ್ನೇಹ ಸಮ್ಮಿಲನ ಹಾಗೂ ಕ್ರೀಡಾಕೂಟ ಕಾರ್ಯಕ್ರಮ

►ಸಮಾರಂಭದಲ್ಲಿ ಪಕ್ಷದ ಟೀ ಶರ್ಟ್ ಬಿಡುಗಡೆ

ಸುಳ್ಯ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಸ್ನೇಹ ಸಮ್ಮಿಲನ ಮತ್ತು ಕ್ರೀಡಾಕೂಟ ಕಾರ್ಯಕ್ರಮವು ಫೆಬ್ರವರಿ 05 ರಂದು ಕೊಟ್ಯಾಡಿಯಲ್ಲಿ ನಡೆಯಿತು.

ಎಸ್‌ಡಿಪಿಐ ಸುಳ್ಯ ಬ್ಲಾಕ್ ಸಮಿತಿ ಅಧ್ಯಕ್ಷ ಮೀರಝ್ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಆಗಮಿಸಿ ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಆಟೋಟಪಗಳನ್ನು ನಡೆಸಲಾಯಿತು. ಕ್ರೀಡಾಕೂಟವನ್ನು ಸುಳ್ಯ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ಉದ್ಘಾಟಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸ್ಫರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ಎಸ್‌ಡಿಪಿಐ ಸುಳ್ಯ ಬ್ಲಾಕ್ ನ ಟೀ ಶರ್ಟ್ ನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ ಬಿಡುಗಡೆಗೊಳಿಸಿದರು‌.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಶರೀಫ್ ನಿಂತಿಕಲ್, ಪಕ್ಷ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಸವಣೂರು,ಸೇರಿದಂತೆ ಗ್ರಾಮ ಸಮಿತಿ ಬ್ಲಾಕ್ ಸಮಿತಿ ಹಾಗೂ ವಿಧಾನಸಭಾ ಸಮಿತಿ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

Join Whatsapp
Exit mobile version