Home ಟಾಪ್ ಸುದ್ದಿಗಳು ಎಸ್‌ಡಿಪಿಐ ರಾಜ್ಯ ಪ್ರತಿನಿಧಿ ಸಭೆ

ಎಸ್‌ಡಿಪಿಐ ರಾಜ್ಯ ಪ್ರತಿನಿಧಿ ಸಭೆ

ಸರ್ವಾನುಮತದಿಂದ ಕೈಗೊಂಡ ನಿರ್ಣಯಗಳು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕರ್ನಾಟ ಪಕ್ಷದ ರಾಜ್ಯ ಪ್ರತಿನಿಧಿ ಸಭೆಯು ದಿನಾಂಕ 22/08/2023 ರಂದು ಬೆಂಗಳೂರಿನ ಎಕೆ‌ಎಸ್ ಫಂಕ್ಷನ್ ಹಾಲ್‌ನಲ್ಲಿ ಜರುಗಿತು.

ಸಭೆಯನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಬೆಳಗ್ಗೆ 10 30ಕ್ಕೆ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಸಭೆಯ ಆರಂಭದಲ್ಲಿ ಇತ್ತೀಚೆಗೆ ನಮ್ಮನ್ನ ಅಗಲಿದ ದಲಿತ ಚಲುವಳಿಯ ಹಿರಿಯ ನಾಯಕರಾದ ಜಿಗಣಿ ಶಂಕರ್ ಮತ್ತು ಮಂಟೇಲಿಂಗಯ್ಯ ಮೈಸೂರು ಇವರಿಗೆ ಮೌನ ಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು. ಸಮಾವೇಶದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಆರ್ ಭಾಸ್ಕರ್ ಪ್ರಸಾದ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ರಾಷ್ಟ್ರೀಯ ಉಪಾಧ್ಯಕ್ಷರಾದ ಶಫಿ ರಾಜಸ್ತಾನ್ ಅವರು ಉದ್ಘಾಟನಾಮಾತುಗಳನ್ನಾಡಿ ದೇಶದಲ್ಲಿ ಯಾವುದೇ ಪಕ್ಷಕ್ಕೆ ಸಮಾನವಲ್ಲ ಎಸ್ಡಿಪಿಐ, ಯಾವುದೇ ಪಕ್ಷದ ಕಾಪಿ ಪೇಸ್ಟ್ ಕೂಡ ಅಲ್ಲ,ಬದಲಾಗಿ ಇತರ ಎಲ್ಲಾ ಪಕ್ಷಕ್ಕಿಂತ ಭಿನ್ನವಾಗಿ ಈ ದೇಶದ ಡೆಮಾಕ್ರಸಿಯನ್ನು ರಕ್ಷಿಸಲು ಸಂಪೂರ್ಣವಾಗಿ ತೊಡಗಿಕೊಂಡಿರುವ ಪರ್ಯಾಯ ಶಕ್ತಿಯಾಗಿದೆ ಎಸ್ಡಿಪಿಐ ಎಂದರು.ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಲತೀಫ್ ಪುತ್ತೂರು, ಮಜೀದ್ ತುಂಬೆ, ಅಫ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಅಶ್ರಫ್ ಮಾಚಾರ್, ಆನಂದ ಮಿತ್ತಬೈಲು ಮತ್ತು ವಿಮೆನ್ ಇಂಡಿಯಾ ಮೂವ್ಮೆಂಟ್ ಇದರ ರಾಜ್ಯ ಕಾರ್ಯದರ್ಶಿ ತನುಜಾವತಿ ಅವರು ಪಕ್ಷದ ರಾಜ್ಯ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು.

ಪಕ್ಷದ ಕಾರ್ಯಚಟುವಟಿಕೆಗಳ ರಾಷ್ಟ್ರೀಯ ವರದಿಯನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಡಾ| ಮೆಹಬೂಬ್ ಅವಾದ್ ಷರೀಫ್ ಅವರು ಮಂಡಿಸಿದರು.

ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ವರದಿಗಳ ಮೇಲಿನ ಚರ್ಚೆಯ ನೇತೃತ್ವವಹಿಸಿಕೊಂಡು ಚರ್ಚಿಸಿದರು. ಇತ್ತೀಚೆಗೆ ರಾಜ್ಯದ ಹಲವು ಕಡೆ ಪಂಚಾಯತ್ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ SDPI ಬೆಂಬಲಿತ ಅಭ್ಯರ್ಥಿಗಳನ್ನು ಸನ್ಮಾನಿಸಿ ಅವರು ಪ್ರತಿನಿಧಿಸುವ ಪಕ್ಷದ ಪಂಚಾಯತ್ ಸಮಿತಿಗೆ ಪ್ರಶಂಶನಾ ಪತ್ರವನ್ನು ನೀಡಲಾಯಿತು.ಪಕ್ಷದ ರಾಷ್ಟೀಯ ಸಮಿತಿ ಸದಸ್ಯರಾದ ದೆಹಲನ್ ಬಾಖವಿ ಅವರು ರಾಜ್ಯ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು. ಪಕ್ಷದರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸ್ ಫ್ರಾಂಕೋ, ರಾಷ್ಟೀಯ ಸಮಿತಿ ಸದಸ್ಯ ಮೌಲಾನ ಮುನವ್ವರಲಿ ಫಾರೂಖಿ,ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ ಅವರು ನಾಯಕರ ಅಭಿಪ್ರಾಯ ಮಂಡಿಸಿರು. ರಾಜ್ಯ ಪ್ರತಿನಿಧಿ ಸಭೆಯ ನಿರ್ಣಯವನ್ನು ರಾಜ್ಯ ನಾಯಕರು ಓದಿ ಹೇಳಿದರು. ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಅಬ್ದುಲ್ ಹನ್ನಾನ್ ಅವರು ಸಮಾರೋಪ ಮಾತುಗಳನ್ನಾಡಿದರೆ, ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಅವರು ವಂದನಾರ್ಪಣೆ ನೆರವೇರಿಸಿದರು.

ದಿನಾಂಕ 27-08-2023 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಪ್ರತಿನಿಧಿಗಳ ಸಭೆಯಲ್ಲಿ ಸರ್ವಾನುಮತದಿಂದ ಕೈಗೊಂಡ ನಿರ್ಣಯಗಳು.

  1. ಏಕರೂಪ ನಾಗರಿಕ ಸಂಹಿತೆ ವಿರುದ್ಧ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳುವಂತೆ ಒತ್ತಾಯ

ಭಾರತದ ಮೂಲ ತತ್ವವಾದ ವಿವಿಧತೆ, ಧಾರ್ಮಿಕ ಸ್ವಾತಂತ್ರ, ಸಾoಸ್ಕೃತಿಕ ವೈವಿಧ್ಯತೆಯನ್ನು ನಾಶ ಮಾಡುವ ಮತ್ತು ಆ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸುವ ದುರುದ್ದೇಶದಿಂದ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಫ್ಯಾಶಿಸ್ಟ್ ಮನಸ್ಥಿತಿಯ ಬಿಜೆಪಿ ಮುಂದಾಗಿದೆ. ಅದನ್ನು ನಿರಾಕರಿಸುವ ನಿರ್ಣಯವನ್ನು ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ವಾಗ್ದಾನ ನೀಡಿತ್ತು. ನೆರೆರಾಜ್ಯಗಳಾದ ತಮಿಳುನಾಡು ಹಾಗೂ ಕೇರಳ ಸರ್ಕಾರಗಳು ಈಗಾಗಲೇ ಏಕರೂಪ ನಾಗರಿಕ ಸಂಹಿತೆಯನ್ನು ನಿರಾಕರಿಸುವ ನಿರ್ಣಯ ಸದನದಲ್ಲಿ ಕೈಗೊಳ್ಳಲಾಗಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಈ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ತಕ್ಷಣ ಈ ಬಗ್ಗೆ ತನ್ನ ನಿರ್ಣಯ ಪ್ರಕಟಿಸಬೇಕೆಂಬ ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

  1. ಕಾವಾಡಿಗರಹಟ್ಟಿ ಕಲುಷಿತ ನೀರು ಪ್ರಕರಣದ ದೋಷಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯ.

ಚಿತ್ರದುರ್ಗದ ಕಾವಾಡಿಗರಹಟ್ಟಿಯ ದಲಿತ ಕೇರಿಯಲ್ಲಿ ಕಲುಷಿತ ನೀರು ಸೇವಿಸಿ ಇಲ್ಲಿಯವರೆಗೆ 8 ಮಂದಿ ಮೃತಪಟ್ಟು, 200 ಕ್ಕೂ ಹೆಚ್ಚು ಜನ ಗಂಭೀರವಾಗಿ ಅಸ್ವಸ್ಥರಾದ ಪ್ರಕರಣ ನಡೆದಿದೆ. ಇಷ್ಟು ದೊಡ್ಡ ಮಟ್ಟದ ದುರಂತ ನಡೆದಿದ್ದರೂ ಸರ್ಕಾರ ಇಲ್ಲಿಯವರೆಗೆ ಅದನ್ನು ಸಣ್ಣ ದುರ್ಘಟನೆಯ ರೂಪದಂತೆಯೇ ನೋಡುತ್ತಿದೆ. ನರಸಂಹಾರದ ಎಲ್ಲ ಲಕ್ಷಣಗಳೂ ಈ ಪ್ರಕರಣದಲ್ಲಿ ಇವೆ. ಇದನ್ನು ಆ ನಿಟ್ಟಿನಲ್ಲಿಯೇ ತನಿಖೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ವಿಚಾರದಲ್ಲಿ ಸರ್ಕಾರ ಗಂಭೀರ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಜೊತೆಗೆ ನೊಂದ ಪರಿವಾರಗಳಿಗೆ ಸೂಕ್ತ ಪರಿಹಾರವನ್ನು ತಕ್ಷಣವೇ ಒದಗಿಸಬೇಕು ಎಂದು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

  1. ಸೌಜನ್ಯ ಪ್ರಕರಣದ ಮರುತನಿಖೆಗೆ ಒತ್ತಾಯ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯದ ಇತಿಹಾಸದಲ್ಲಿ ಅಳಿಸಲಾಗದ ಕಪ್ಪು ಚುಕ್ಕೆ. ಜೊತೆಗೆ ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಕ್ಕೂ ಒಂದು ಕಳಂಕ. ಹಾಗಿದ್ದೂ ಈ ಪ್ರಕರಣದಲ್ಲಿ ತನಿಖಾ ಪ್ರಕ್ರಿಯೆ ಮತ್ತು ನ್ಯಾಯ ಪ್ರಕ್ರಿಯೆಯನ್ನು ನ್ಯಾಯ ಕೊಡಿಸದೆಯೇ, ಆ ಘೋರ ಅಪರಾಧ ಎಸಗಿದವರಿಗೆ ಶಿಕ್ಷೆ ನೀಡದೆಯೇ ಪೂರ್ಣಗೊಳಿಸಿರುವುದು ಒಪ್ಪಲಾಗದ ವಿಚಾರ. ಸರ್ಕಾರ ಈ ಪ್ರಕರಣವನ್ನು ಮರುತನಿಖೆಗೆ ಒಳಪಡೆಸಲೇಬೇಕು ಮತ್ತು ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

  1. ಅನೈತಿಕ ಪೊಲೀಸ್ ಗಿರಿ ಮತ್ತು ದ್ವೇಷ ಭಾಷಣ ಪ್ರಕರಣಗಳ ವಿರುದ್ಧ ಕ್ರಮಕ್ಕೆ ಒತ್ತಾಯ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ದ್ವೇಷ ಭಾಷಣಗಳು ಹಾಗೂ ಅನೈತಿಕ ಪೋಲಿಸ್ ಗಿರಿ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಆಶ್ವಾಸನೆ ನೀಡಿತ್ತು. ಆದರೆ ಹೊಸ ಸರ್ಕಾರ ಬಂದ ಮೇಲೂ ಅಂತಹ ಘಟನೆಗಳು ಮೊದಲಿನಂತೆಯೇ ಮುಂದುವರಿಯುತ್ತಿವೆ. ಬಾದಾಮಿಯಲ್ಲಿ ಬಕ್ರೀದ್ ಕುರ್ಬಾನಿ ವಿಚಾರವಾಗಿ ಯುವಕನನ್ನು ಮರಕ್ಕೆ ಕಟ್ಟಿ ಹಿಂಸಿಸಿದ ಪ್ರಕರಣ. ಸ್ವತಃ ಸ್ಪೀಕರ್ ಖಾದರ್ ಕ್ಷೇತ್ರದ ಸೋಮೇಶ್ವರ ಬೀಚ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ ಹೀಗೆ ಸಾಕಷ್ಟು ಅನೈತಿಕ ಪೋಲಿಸ್ ಗಿರಿ ಘಟನೆಗಳು ಮುಂದುವರಿಯುತ್ತಲೇ ಇವೆ.

ಅದೇ ರೀತಿ ಹಾಸನದ ರಘು ಬೆದರಿಕೆ ಪ್ರಕರಣ, ಶರಣ್ ಪಂಪ್ವೆಲ್ ದ್ವೇಷ ಭಾಷಣ ಸೇರಿದಂತೆ ಹಲವಾರು ದ್ವೇಷ ಭಾಷಣಗಳು ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಲೇ ಇವೆ. ಇಂತಹ ಪ್ರಕರಣಗಳನ್ನು ತಡೆಯಲೆಂದೆ ವಿಶೇಷ ಪಡೆಯನ್ನು ಸರ್ಕಾರ ರಚಿಸಿದೆಯಾದರೂ ಅದು ಕೇವಲ ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿದೆ. ಈ ಹಿನ್ನೆಲೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕೆಂದು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

  1. ಚಾಮರಾಜನಗರ ಆಕ್ಸಿಜೆನ್ ದುರಂತ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಒತ್ತಾಯ.

ಚಾಮರಾಜನಗರ ಆಕ್ಸಿಜನ್ ದುರಂತ ಸಂಭವಿಸಿ ಎರಡು ವರ್ಷ ಕಳೆದಿದ್ದರೂ ಈವರೆಗೆ ಈ ಪ್ರಕರಣದ ತಪ್ಪಿತಸ್ಥರನ್ನು ಗುರುತಿಸುವ ಮತ್ತು ಶಿಕ್ಷಿಸುವ ಕಾರ್ಯ ನಡೆದಿಲ್ಲ. ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನು ಮರುತನಿಖೆ ಮಾಡುವುದಾಗಿ ಹೇಳಿದ್ದರೂ ಇನ್ನೂ ಅದರ ಪ್ರಕ್ರಿಯೆ ಆರಂಭಿಸಿಲ್ಲ. ಜೊತೆಗೆ ಆ ಪ್ರಕರಣದ ಸಂತ್ರಸ್ತ ಕುಟುಂಬಗಳಿಗೆ ಸಮರ್ಪಕ ಪರಿಹಾರವನ್ನೂ ಒದಗಿಸಿಲ್ಲ. ಸರ್ಕಾರ ಸೂಕ್ತ ತನಿಖೆ ನಡೆಸಿ ಆ ದುರಂತದಲ್ಲಿ ಸಾವಿಗೀಡಾದ 37 ಜನರ ಸಾವಿಗೆ ನ್ಯಾಯ ಒದಗಿಸಬೇಕು ಮತ್ತು ಪರಿಹಾರ ಒದಗಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

  1. ಹಿಜಾಬ್, 2ಬಿ ಮೀಸಲಾತಿ ರದ್ದು ಹಿಂಪಡೆಯಲು ಒತ್ತಾಯ

ಕೋಮುವಾದಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮುಸ್ಲಿಂ ಸಮುದಾಯವನ್ಮು ಕಾಡುವ ಏಕೈಕ ಉದ್ದೇಶದಿಂದ ವಿದ್ಯಾಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಮತ್ತು ಮುಸ್ಲಿಮರ ಮೀಸಲಾತಿಯನ್ನು ರದ್ದು ಮಾಡಿತ್ತು. ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಈ ನಿಷೇಧಗಳನ್ನು ಹಿಂಪಡೆಯುವ ವಾಗ್ದಾನ ನೀಡಿತ್ತು. ಆದರೆ ಇಲ್ಲಿಯವರೆಗೆ ಈ ವಿಚಾರದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ತಕ್ಷಣ ಈ ಎರಡೂ ದ್ವೇಷದ ನಿಷೇಧ/ರದ್ದನ್ನು ಹಿಂಪಡೆಯುವ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

Join Whatsapp
Exit mobile version