Home ಟಾಪ್ ಸುದ್ದಿಗಳು ಸಂಘಪರಿವಾರದಿಂದ ಹತ್ಯೆಯಾದ ಇದ್ರೀಸ್ ನಿವಾಸಕ್ಕೆ ಎಸ್’ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಭೇಟಿ; ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ

ಸಂಘಪರಿವಾರದಿಂದ ಹತ್ಯೆಯಾದ ಇದ್ರೀಸ್ ನಿವಾಸಕ್ಕೆ ಎಸ್’ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಭೇಟಿ; ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ

ಮಂಡ್ಯ: ಜಾನುವಾರು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಸಂಘಪರಿವಾರದ ಪುನೀತ್ ಕೆರೆಹಳ್ಳಿ ಮತ್ತು ತಂಡದಿಂದ ಹತ್ಯೆಗೀಡಾದ ಇದ್ರೀಸ್ ಪಾಷಾ ಅವರ ನಿವಾಸಕ್ಕೆ ಎಸ್’ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ನೇತೃತ್ವದ ನಿಯೋಗ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿತು.


ಇದ್ರೀಸ್ ಅವರ ಸಹೋದರನೊಂದಿಗೆ ಮಾತುಕತೆ ನಡೆಸಿದ ಅಬ್ದುಲ್ ಮಜೀದ್, ಕುಟುಂಬದ ಪರವಾಗಿ ಪಕ್ಷ ದೃಢವಾಗಿ ನಿಲ್ಲಲಿದೆ. ಕುಟುಂಬ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಪಕ್ಷದ ಜಿಲ್ಲಾ ಮತ್ತು ಸ್ಥಳೀಯ ಮುಖಂಡರು ಇದ್ದರು.

Join Whatsapp
Exit mobile version