ಮಂಗಳೂರು: ಕಾಂತರಾಜ್ ವರದಿ ಅಂಗೀಕರಿಸಲು ಮತ್ತು 2ಬಿ ಮೀಸಲಾತಿ ಶೇ.8ಕ್ಕೆ ಏರಿಸುವಂತೆ SDPI ಧರಣಿ

Prasthutha|

ಉಡುಪಿ: ಕರ್ನಾಟಕ ಸರ್ಕಾರ ಕಾಂತರಾಜ್ ಆಯೋಗದ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು ಮತ್ತು ಮುಸ್ಲಿಮರ ಮೀಸಲಾತಿ 2ಬಿ ಪ್ರಮಾಣವನ್ನು ಶೇ. 8ಕ್ಕೆ ಏರಿಸಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ವತಿಯಿಂದ ಅಕ್ಟೋಬರ್ 09, 2023 ರಿಂದ ಅಕ್ಟೋಬರ್ 19 ರವರೆಗೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ SDPI ದಕ್ಷಿಣ ಕನ್ನಡ ವತಿಯಿಂದ ಮಂಗಳೂರು ನಗರದ ಮಿನಿ ವಿಧಾನಸೌಧ ಮುಂಭಾಗ ಧರಣಿಯನ್ನು ನಡೆಸಲಾಗುತ್ತಿದೆ.

- Advertisement -


ಎಸ್ ಡಿಪಿಐ ದ.ಕ. ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು, ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಹಾಗೂ ಎಸ್ ಡಿಪಿಐ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದಾರೆ.

Join Whatsapp