Home ಕರಾವಳಿ ಬಿಜೆಪಿ ಜನಪ್ರತಿನಿಧಿಗಳ ಒತ್ತಡವೇ ಅನೈತಿಕ ಪೋಲಿಸ್ ಗಿರಿ ನಡೆಸಿದವರಿಗೆ ತಕ್ಷಣವೇ ಜಾಮೀನಾಗಲು ಕಾರಣ | ಎಸ್...

ಬಿಜೆಪಿ ಜನಪ್ರತಿನಿಧಿಗಳ ಒತ್ತಡವೇ ಅನೈತಿಕ ಪೋಲಿಸ್ ಗಿರಿ ನಡೆಸಿದವರಿಗೆ ತಕ್ಷಣವೇ ಜಾಮೀನಾಗಲು ಕಾರಣ | ಎಸ್ ಡಿಪಿಐ ಆರೋಪ

ಮಂಗಳೂರು: ಇತ್ತೀಚಿನಿಂದ ದ.ಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅನೈತಿಕ ಪೋಲಿಸ್ ಗಿರಿ ನಡೆಸಿದ ಭಜರಂಗದಳದ ಗೂಂಡಾಗಳಿಗೆ ತಕ್ಷಣ ಜಾಮೀನು ದೊರಕಲು ಬಿಜೆಪಿ ಜನಪ್ರತಿನಿಧಿಗಳು ತಮ್ಮ ಅಧಿಕಾರದ ಪ್ರಭಾವವನ್ನು ದುರುಪಯೋಗ ಪಡಿಸಿಕೊಂಡು ಪೋಲಿಸ್ ಅಧಿಕಾರಿಗಳಿಗೆ ಒತ್ತಡ ಹೇರುತ್ತಿರುವುದೇ ಅನೈತಿಕ ಪೋಲಿಸ್ ಗಿರಿ ನಡೆಸುವ ಭಜರಂಗದಳದ ಗೂಂಡಾಗಳಿಗೆ ತಕ್ಷಣ ಜಾಮೀನು ಲಭಿಸಲು ಕಾರಣವಾಗಿದೆ ಎಂದು SDPI ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆರೋಪಿಸಿದ್ದಾರೆ.

ದೇಶದೆಲ್ಲೆಡೆ ಸಂಘಪರಿವಾರ ಮತ್ತು ಬಿಜೆಪಿ ಕೋಮು ದ್ರುವೀಕರಣ ಮಾಡುತ್ತಿರುವುದು ಕಾಣಲು ಸಾಧ್ಯ ವಾಗುತ್ತಿದೆ,ಅದರ ಮುಂದುವರಿದ ಭಾಗವಾಗಿ ದ.ಕ ಜಿಲ್ಲೆಯಲ್ಲೂ ಈ ಹಿಂದೆಗಿಂತ ಸಂಘಪರಿವಾರ ಸಂಘಟನೆಗಳ ಅನೈತಿಕ ಗೂಂಡಾಗಿರಿ ಹೆಚ್ಚಳವಾಗಿದೆ,ಇದಕ್ಕೆ ಜಿಲ್ಲೆಯ ಬಿಜೆಪಿ ಶಾಸಕರು ನೇರ ಕಾರಣವಾಗಿದ್ದಾರೆ,ಅನೈತಿಕ ಗೂಂಡಾಗಿರಿ ನಡೆಸಿದ ಸಂದರ್ಭದಲ್ಲಿ ಪೋಲಿಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮುಂದಾಗುವ ಸಂದರ್ಭದಲ್ಲಿ ಬಿಜೆಪಿ ಜನಪ್ರತಿನಿಧಿಗಳು ಪೋಲಿಸ್ ಅಧಿಕಾರಿಗಳಿಗೆ ಒತ್ತಡ ಹಾಕಿ ಠಾಣೆಯಲ್ಲೇ ಜಾಮೀನು ನೀಡುವಂತಹ ಸಣ್ಣಪುಟ್ಟ ಸೆಕ್ಷನ್ ಗಳನ್ನು ಹಾಕಿ ಅಥವಾ ಒಂದೆರಡು ದಿನಗಳಲ್ಲಿ ನ್ಯಾಯಾಧೀಶರಿಂದ ಜಾಮೀನು ಲಭಿಸಿ ಹೊರ ಬರುವಂತಹ ಕಾಯಿದೆ ಗಳನ್ನು ಹಾಕಿಸಿ ಇನ್ನಷ್ಟು ಅನೈತಿಕ ಪೋಲಿಸ್ ಗಿರಿ ನಡೆಸಲು ಪ್ರೇರಣೆ ನೀಡುತ್ತಿದ್ದಾರೆ.


ಇತ್ತೀಚಿಗೆ ಕಾರಿನಲ್ಲಿ ತೆರಳುತ್ತಿದ್ದ ಅನ್ಯ ಸಮುದಾಯದ ದಂಪತಿಗಳ ಜೊತೆಗೆ ಗೂಂಡಾಗಿರಿ ನಡೆಸಿ ಬಂಧನಕ್ಕೆ ಒಳಗಾಗಿದ್ದ ಭಜರಂಗದಳದ ಗೂಂಡಾಗಳನ್ನು ಮೂಡಬಿದ್ರೆ ಕ್ಷೇತ್ರದ ಶಾಸಕ ಉಮನಾಥ್ ಕೋಟ್ಯಾನ್ ಠಾಣೆಗೆ ತೆರಳಿ,ಅಂದೇ ಬಿಡುಗಡೆಯಾಗುವ ಸೆಕ್ಷನ್ ಹಾಕಿಸಿದ ಕಾರಣ ಕೋರ್ಟ್ ಗೂಂಡಾಗಳಿಗೆ ಜಾಮೀನು ನೀಡಿದೆ,ಈ ಎಲ್ಲಾ ಬೆಳವಣಿಗೆಗಳಿಂದ ಭಜರಂಗದಳದ ಗೂಂಡಾಗಳಿಗೆ ಅನೈತಿಕ ಪೋಲಿಸ್ ಗಿರಿ ನಡೆಸಲು ನೇರವಾಗಿ ಪ್ರೇರಣೆ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ಮತ್ತು ಕಾನೂನು ಪಾಲನೆಯ ಪ್ರತಿಜ್ಞಾ ವಿಧಿ ಮಾಡಿರುವ ಪೋಲಿಸ್ ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೆ ಕಾನೂನು ರೀತಿಯ ಕ್ರಮ ಕೈಗೊಂಡು ಅಶಾಂತಿ ಹಬ್ಬಿಸುವವರ ವಿರುದ್ಧ ಕಠಿಣ ಜರುಗಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version