ಕಡಬ | ಸರ್ಕಾರಿ ಶಾಲೆಯಲ್ಲಿ RSS ಬೈಠಕ್: ಎರಡು ದಿನ ಕಳೆದರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಇಲಾಖೆ: ಎಸ್‌’ಡಿಪಿಐ ಆಕ್ರೋಶ

Prasthutha|

ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲ್ಲೂಕಿನ ಎಡಮಂಗಳ ಸಮೀಪದ ಕರಿಂಬಿಲ ಶಾಲೆಯಲ್ಲಿ  ಸಂಘಪರಿವಾರದ ಬೈಠಕ್ ನಡೆಸಲು ಅನುಮತಿ ನೀಡಿದ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾಡಳಿತ ಮಂಡಳಿಯ ವಿರುದ್ಧ ಘಟನೆ ನಡೆದು ಎರಡು ದಿನ ಕಳೆದರು ಕಾನೂನು ಕ್ರಮ ಕೈಗೊಳ್ಳದ ಇಲಾಖೆಯ ವಿರುದ್ಧ ಎಸ್‌ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸರ್ಕಾರಿ ಶಾಲೆಯಲ್ಲಿ ಶೈಕ್ಷಣಿಕೇತರವಾಗಿ ಯಾವುದೇ ಸಂಘ ಸಂಸ್ಥೆಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ನೀಡುವುದು ಕಾನೂನು ಬಾಹಿರ ಕೃತ್ಯವಾಗಿದೆ.ಅದರಲ್ಲೂ ಮುಸ್ಲಿಂ ದ್ವೇಷವನ್ನೇ ಅಸ್ತ್ರವಾಗಿರಿಸಿರುವ ಸಂಘಪರಿವಾರದಂತಹ ಸಂಘಟನೆಗಳಿಗೆ ಶಾಲೆಯ ಆವರಣವನ್ನು ಸಂಘದ ಬೈಠಕ್ ಗೆ ಅನುಮತಿ ನೀಡಿರುವುದು ಆಘಾತಕಾರಿಯಾಗಿದೆ.ಘಟನೆ ನಡೆದು ಎರಡು ದಿನಗಳು ಕಳೆದರು ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ



Join Whatsapp
Exit mobile version