Home ಕರಾವಳಿ ಪುದು, ಗ್ರಾಮ ಲೆಕ್ಕಾಧಿಕಾರಿಯನ್ನು ಖಾಯಂ ಸೇವೆಗಾಗಿ ನಿಯುಕ್ತಿಗೊಳಿಸಲು ಎಸ್ ಡಿಪಿಐ ಆಗ್ರಹ

ಪುದು, ಗ್ರಾಮ ಲೆಕ್ಕಾಧಿಕಾರಿಯನ್ನು ಖಾಯಂ ಸೇವೆಗಾಗಿ ನಿಯುಕ್ತಿಗೊಳಿಸಲು ಎಸ್ ಡಿಪಿಐ ಆಗ್ರಹ

ಫರಂಗಿಪೇಟೆ: ಪುದು ಗ್ರಾಮ ಪಂಚಾಯತ್ ಕಚೇರಿಗೆ ಖಾಯಂ ಸೇವೆಗಾಗಿ ಗ್ರಾಮ ಲೆಕ್ಕಾಧಿಕಾರಿಯನ್ನು ನಿಯುಕ್ತಿಗೊಳಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ ) ಪುದು ಗ್ರಾಮ ಸಮಿತಿ ನಿಯೋಗ ಬಂಟ್ವಾಳ ತಾಲೂಕು ಕಂದಾಯ ಅಧಿಕಾರಿಗೆ ಮನವಿ ಸಲ್ಲಿಸಿತು.

ಪುದು ಗ್ರಾಮ ಪಂಚಾಯತ್ ಒಟ್ಟು 34 ಸದಸ್ಯ ಸ್ಥಾನ ಇರುವ ದೊಡ್ಡ ಪಂಚಾಯತ್ ಆಗಿದ್ದು, ಇಲ್ಲಿನ ಪಂಚಾಯತ್ ಗೆ ಗ್ರಾಮ ಲೆಕ್ಕಾಧಿಕಾರಿ ಖಾಯಂ ಆಗಿ ನಿಯೋಜಿತವಾಗಿಲ್ಲದ ಕಾರಣದಿಂದ ಮೇರಮಜಲ್ ಗ್ರಾಮ ಪಂಚಾಯತಿಯ ಗ್ರಾಮ ಲೆಕ್ಕಾಧಿಕಾರಿ ವಾರದಲ್ಲಿ ಮೂರು ದಿವಸ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಪಂಚಾಯತ್ ನಲ್ಲಿ ಪೂರ್ಣವಾಧಿ ಗ್ರಾಮ ಲೆಕ್ಕಾಧಿಕಾರಿಯ ಸೇವೆ ಇಲ್ಲದ ಕಾರಣದಿಂದ ಜನರು ತಮ್ಮ ಅಗತ್ಯಗಳಿಗಾಗಿ ದಿನನಿತ್ಯ ಗ್ರಾಮ ಲೆಕ್ಕಾಧಿಕಾರಿಯ ಬರುವಿಕೆಗಾಗಿ ಕಾಯುತ್ತಾ ದಿನಕಳೆಯುತ್ತಿದ್ದಾರೆ. ಆದ್ದರಿಂದ ಗ್ರಾಮದ ಸರ್ವ ಜನರ ಹಿತದೃಷ್ಟಿಯಿಂದ ಇಲ್ಲಿನ ಪಂಚಾಯತ್ ಗೆ ಪೂರ್ಣಾವಧಿ ಗ್ರಾಮ ಲೆಕ್ಕಾಧಿಕಾರಿಯನ್ನು ನಿಯೋಜಿಸ ಬೇಕೆಂದು ನಿಯೋಗ ಆಗ್ರಹಿಸಿತು.

ಎಸ್ ಡಿಪಿಐ ಪುದು ಗ್ರಾಮ ಸಮಿತಿ ಉಪಾಧ್ಯಕ್ಷ ಅಬ್ಬಾಸ್ ಪೇರಿಮಾರ್, ಕಾರ್ಯದರ್ಶಿ ಮುಹಮ್ಮದ್ ಶಾಫಿ, ಗ್ರಾಮ ಪಂಚಾಯತ್ ಸದಸ್ಯ ನಝೀರ್ ಕುಂಜತ್ಕಳ, ಅಶ್ರಫ್ ಸುಜೀರ್, ಇರ್ಫಾನ್ ಕುಂಜತ್ಕಳ  ನಿಯೋಗದಲ್ಲಿದ್ದರು.

Join Whatsapp
Exit mobile version