ಸತ್ಯವನ್ನು ಅದೆಷ್ಟು ದಿನ ಬ್ಲಾಕ್ ಮಾಡುತ್ತೀರಿ?: ಕೇಂದ್ರಕ್ಕೆ SDPI ಪ್ರಶ್ನೆ

Prasthutha|

ಬೆಂಗಳೂರು: ಸತ್ಯ ಹೇಳುವ ಡಾಕ್ಯುಮೆಂಟರಿ ಪ್ರಧಾನಿ ನರೇಂದ್ರ ಮೋದಿಯವರ ನಿದ್ದೆಗೆಡಿಸಿದೆ. ಸತ್ಯವನ್ನು ಅದೆಷ್ಟು ದಿನ ಬ್ಲಾಕ್ ಮಾಡ್ತೀರಿ? ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.    

- Advertisement -

ಈ ಕುರಿತು ಟ್ವಿಟ್ ಮಾಡಿರುವ ಅವರು, ಮಾನ್ಯ ನರೇಂದ್ರ ಮೋದಿ ಅವರೇ, ಸತ್ಯ ಹೇಳುವ ಒಂದು ಡಾಕ್ಯುಮೆಂಟರಿ ನಿಮ್ಮ ನಿದ್ದೆಗೆಡಿಸುತ್ತದೆಯೇ? ಸತ್ಯವನ್ನು ಅದೆಷ್ಟು ದಿನ ಬ್ಲಾಕ್ ಮಾಡ್ತೀರಿ? ಇಂದಲ್ಲ ನಾಳೆ ಅದು ಜನರ ಮುಂದೆ ಬಂದೇ ಬರುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

2002ರ ಗುಜರಾತ್ ಗಲಭೆ ಕುರಿತು ತನಿಖೆ ನಡೆಸಲು ಬ್ರಿಟಿಷ್ ಸರಕಾರ ಕಳುಹಿಸಿದ ತಂಡ, ಹತ್ಯಾಕಾಂಡಕ್ಕೆ ಕಾರಣವಾದ ‘ಶಿಕ್ಷೆ ರಹಿತ ವಾತಾವರಣ’ ನಿರ್ಮಾಣಕ್ಕೆ ರಾಜ್ಯದ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇರ ಹೊಣೆ ಎಂದು ಹೇಳಿರುವುದಾಗಿ ಬಿಬಿಸಿ ಬಿಡುಗಡೆಗೊಳಿಸಿದ ‘ದಿ ಮೋದಿ ಕ್ವಶ್ಚೈನ್’ ಎಂಬ ಡಾಕ್ಯುಮೆಂಟರಿಯಲ್ಲಿ ಉಲ್ಲೇಖಿಸಲಾಗಿತ್ತು. 

- Advertisement -

ಬಿಡುಗಡೆಯಾದ ಒಂದೇ ದಿನದಲ್ಲಿ ಡಾಕ್ಯುಮೆಂಟರಿಯನ್ನು ಡಿಲೀಟ್ ಮಾಡಲು ಯುಟ್ಯೂಬ್ ಗೆ ಕೇಂದ್ರ ಸರ್ಕಾರ ಆದೇಶ ನೀಡಿತ್ತು.

Join Whatsapp