Home ರಾಜ್ಯ ಚಿಕ್ಕೋಡಿ: NDA ಆಡಳಿತದಲ್ಲಿ ನಡೆಯುತ್ತಿರುವ ಮಸೀದಿಗಳ ಮೇಲೆ ವಿಧ್ವಂಸಕ ಕೃತ್ಯಗಳು, ಗುಂಪು ಹತ್ಯೆ ಖಂಡಿಸಿ SDPI...

ಚಿಕ್ಕೋಡಿ: NDA ಆಡಳಿತದಲ್ಲಿ ನಡೆಯುತ್ತಿರುವ ಮಸೀದಿಗಳ ಮೇಲೆ ವಿಧ್ವಂಸಕ ಕೃತ್ಯಗಳು, ಗುಂಪು ಹತ್ಯೆ ಖಂಡಿಸಿ SDPI ಪ್ರತಿಭಟನೆ

ಚಿಕ್ಕೋಡಿ: ಮೋದಿ ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರವಹಿಸಿಕೊಂಡ ಕ್ಷಣದಿಂದ ಅವರ NDA ಸರ್ಕಾರದ ಆಡಳಿತದಲ್ಲಿ ನಡೆಯುತ್ತಿರುವ ವ್ಯಾಪಕ ಗುಂಪು ಹತ್ಯೆ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ಚಿಕ್ಕೋಡಿ ವಿಧಾನಸಭಾಕ್ಷೇತ್ರ ಸಮಿತಿಯಿಂದ  ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಲೋಕಸಭಾ ಚುನಾವಣೆಯ ನಂತರ ಇದುವರೆಗೆ  ಸಾಲು ಸಾಲು ಗುಂಪು ಹತ್ಯೆಗಳು, ಶೋಷಣೆ ಮತ್ತು ಮುಸ್ಲಿಮರ ಅಂಗಡಿ ಲೂಟಿ ಮಾಡುವ ಹೀನ ಕೃತ್ಯಗಳು ನಡೆದಿವೆ. ಕನ್ವರ್ ಯಾತ್ರೆ ಹೋಗುವ ದಾರಿಯಲ್ಲಿ ಅಂಗಡಿಗಳು ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ಯನ್ನು  ಪ್ರದರ್ಶಿಸಬೇಕು ಎಂದು ಸರಕಾರಗಳು ಫರ್ಮಾನು ಹೊರಡಿಸುತ್ತಿವೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಮರನ್ನು ಗುರಿಯಾಗಿಸಿ ಸುಳ್ಳು ಆರೋಪ ಹೊರಿಸಿ ಗುಂಪು ಹಲ್ಲೆ ಮಾಡಿ ಗೋರಕ್ಷಣೆ ಹೆಸರಿನಲ್ಲಿ ಅನೈತಿಕ ಗೂಂಡಾಗಿರಿ  ಮಾಡಿ ಕೊಲ್ಲಲಾಗುತ್ತಿದ.  ಇನ್ನು ಮಧ್ಯಪ್ರದೇಶದ ಒಂದು ಮುಸ್ಲಿಂ ಮನೆಯಲ್ಲಿ ದನದ ಮಾಂಸ ದೊರಕಿತು ಎಂಬ ಆರೋಪದ ಹಿನ್ನಲೆಯಲ್ಲಿ ಆ ಬೀದಿಯ ಮುಸ್ಲಿಮರಿಗೆ ಸೇರಿದ 13 ಮನೆಗಳನ್ನು ಬುಲ್ಲೋಜರ್ ಬಳಸಿ ದ್ವಂಸ ಮಾಡಲಾಗಿದೆ

ಅದೇ ರೀತಿ  ಹಿಮಾಚಲ ಪ್ರದೇಶದಲ್ಲಿ ಬಕ್ರೀದ್ ದಿನ ಪ್ರಾಣಿ ಹತ್ಯೆಯಾಗಿದೆ ಎಂದು ಆರೋಪಿಸಿ ಮುಸ್ಲಿಂ ವ್ಯಕ್ತಿಗೆ ಸೇರಿದ ಬಟ್ಟೆ ಅಂಗಡಿಯನ್ನು ದ್ವಂಸ ಮಾಡಿ ಅಲ್ಲಿದ್ದ ಬಟ್ಟೆಗಳನ್ನು ಲೂಟಿ ಮಾಡಲಾಯಿತು. ಅದೇ ದಿನ ಉತ್ತರ ಪ್ರದೇಶದ ಅಲಿಗಡದಲ್ಲಿ ಯುವಕನನ್ನು ಕಳ್ಳತನದ ಆರೋಪದ ಮೇಲೆ ಗುಂಪು ಹತ್ಯೆ ಮಾಡಲಾಯಿತು. ಇದೇ ತಿಂಗಳಲ್ಲಿ ಜಾರ್ಖಂಡ್ ನಲ್ಲಿ ಮುಸ್ಲಿಂ ಯುವಕನೋರ್ವನನ್ನು ಹತ್ಯೆ ಮಾಡಲಾಗಿದೆ. ಹೀಗೆ ಪಟ್ಟಿ ಈ ತರಹದ ಪ್ರಕರಣಗಳು ಹೆಚ್ಚುತ್ತಿವೆ ವಿನಃ ಹತೋಟಿಗೆ ತರಲು ಸರಕಾರಗಳಿಗೆ ಮಂಕು ಎರದಿದೆ.

ಇಷ್ಟೆಲ್ಲ ದೌರ್ಜನ್ಯಗಳು ನಡೆಯುತ್ತಿದ್ದರೂ ಕಾಂಗ್ರೆಸ್ ನಾಯಕರು ತುಟಿ ಬಿಚ್ಚದೆ ತಮ್ಮ ತಮ್ಮ ಹಿತಕಾಯುವಲ್ಲಿ  ತಲ್ಲೀನರಾಗಿದ್ದಾರೆ.  ಅಲ್ಪಸಂಖ್ಯಾತರ ಮತ್ತು ದಲಿತರ ಹಿತ ಕಾಯುತ್ತೇವೆ ಎಂದು ವಾಗ್ದಾನ ನೀಡಿ ಅವರ ಮತಗಳನ್ನು ಪಡೆಯುವ ಮೂಲಕ ತಮ್ಮ ಶಕ್ತಿ ವೃದ್ಧಿಸಿಕೊಂಡಿರುವ ಕಾಂಗ್ರೇಸ್ ಮತ್ತು ಇತರೆ ಪಕ್ಷಗಳು ಈ ಕುರಿತ ಮೌನ ವಹಿಸಿವೆ. ಇದು ಅವರು ಈ ಎರಡೂ ಸಮುದಾಯಗಳಿಗೆ ಮಾಡುತ್ತಿರುವ ದ್ರೋಹ. ವಿಪಕ್ಷಗಳ ಈ ಸ್ವಾರ್ಥ ನಡೆಯನ್ನು ಎಸ್.ಡಿ.ಪಿ.ಐ ಖಂಡಿಸುತ್ತದೆ ಎಂದು ಪಕ್ಷ ತನ್ನ ಪ್ರತಿಭಟನೆ ಮೂಲಕ ತಿಳಿಸಿದೆ.

ಇದೆಲ್ಲವೂ ಸಹ ಬಿಜೆಪಿ, ಸಂಘಪರಿವಾರ ಮತ್ತು ಸ್ವತಃ ಮೋದಿಯವರೇ ಹಬ್ಬುತ್ತಿರುವ ದ್ವೇಷದ ಕಾರಣಕ್ಕೆ ನಡೆಯುತ್ತಿದೆ.  63 ಸ್ಥಾನಗಳನ್ನು ಮೊನ್ನೆಯ ಚುನಾವಣೆಯಲ್ಲಿ ಕಳೆದುಕೊಂಡು ಈಗ ಅವರಿವರ ಸಹಾಯದಿಂದ ಅಧಿಕಾರ ಉಳಿಸಿಕೊಂಡಿದೆ.

ಬಿಜೆಪಿ ಇದೇ ರೀತಿ ತನ್ನ ದ್ವೇಷ ನೀತಿಯನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ  ದೇಶದ ಜನ ಈ ಪಕ್ಷವನ್ನು ಸಂಪೂರ್ಣವಾಗಿ ಕಿತ್ತು ಬಿಸಾಡಲಿದ್ದಾರೆ. ಜೊತೆಗೆ ನಮ್ಮ ಪಕ್ಷ ಇದರ ವಿರುದ್ಧ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಎಸ್.ಡಿ.ಪಿ.ಐ ತನ್ನ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದೆ.

 ಚಿಕ್ಕೋಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ತಬ್ರೆಜ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಪ್ರತಿಭಟನೆಯಲ್ಲಿ  ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಮುಅಜ್ಜಮ್ ಜಾ ಮೂಲಾನಿ, ಜಿಲ್ಲಾ ಕಾರ್ಯದರ್ಶಿ ಝಾಕಿರ್ ನಾಯುಕ್ವಾಡಿ, ಜಿಲ್ಲಾ ಕೋಶಾಧಿಕಾರಿ ಮುಜಫರ್ ಬಾಗವಾನ್, ಜಿಲ್ಲಾ ಸಮಿತಿ ಸದಸ್ಯರಾದ ಇಮ್ರಾನ್, ಕ್ಷೇತ್ರ ಸಮಿತಿ ಸರ್ವ ಸದಸ್ಯರು, ಸಮಸ್ತ ಮಸೀದಿ ಸಮಿತಿಗಳ ಸದಸ್ಯರುಗಳು, ಮುಸ್ಲಿಂ ಬಾಂಧವರು,  ಎಸ್‌ಡಿಪಿಐ ಮುಖಂಡರು, ಕಾರ್ಯಕರ್ತರು, ಸದಸ್ಯರು ಹಾಗೂ ಬೆಂಬಲಿಗರು  ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Join Whatsapp
Exit mobile version