Home ಟಾಪ್ ಸುದ್ದಿಗಳು ತಮಿಳುನಾಡು ಸ್ಥಳೀಯ ಚುನಾವಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಎಸ್ ಡಿಪಿಐ

ತಮಿಳುನಾಡು ಸ್ಥಳೀಯ ಚುನಾವಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಎಸ್ ಡಿಪಿಐ

ಚೆನ್ನೈ: ತಮಿಳುನಾಡಿನ ನಗರ ಪ್ರದೇಶದಲ್ಲಿ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಎಸ್ ಡಿಪಿಐ ಅದ್ಭುತ ಯಶಸ್ಸನ್ನು ಸಾಧಿಸಿದೆ. ನಗರ ಪ್ರದೇಶದಲ್ಲಿ ಮಾತ್ರ ಎಸ್ ಡಿಪಿಐ 26 ವಾರ್ಡ್ ಗಳನ್ನು ಗೆದ್ದಿದೆ. ಕಳೆದ ವರ್ಷ ಇದ್ದ8 ವಾರ್ಡ್ ಗಳು ಇದೀಗ ಮೂರು ಪಟ್ಟು ಹೆಚ್ಚಾಗಿದೆ.

 ಈ ಬಾರಿಯ ನಗರ ಸ್ಥಳೀಯ ಚುನಾವಣೆಯಲ್ಲಿ ಪಕ್ಷವು 1 ಕಾರ್ಪೊರೇಷನ್ ವಾರ್ಡ್, 8 ಪುರಸಭೆ ವಾರ್ಡ್ ಗಳು ಮತ್ತು 17 ಪಟ್ಟಣ ಪಂಚಾಯಿತಿ ವಾರ್ಡ್ ಗಳನ್ನು ಗೆದ್ದಿದೆ. ಗ್ರಾಮೀಣ ಸ್ಥಳೀಯ ಚುನಾವಣೆಯಲ್ಲಿ ಗೆದ್ದರಿರುವ 138 ವಾರ್ಡ್ ಗಳು ಸೇರಿದರೆ ತಮಿಳುನಾಡಿನಲ್ಲಿ  ಒಟ್ಟು 164 ವಾರ್ಡ್ ಗಳನ್ನು ಎಸ್ ಡಿಪಿಐ ತನ್ನದಾಗಿಸಿಕೊಂಡಿದೆ.

ಈ ಬಾರಿಯ ಸ್ಥಳೀಯ ಚುನಾವಣೆಯಲ್ಲಿ ಕಳೆದ ಬಾರಿ ಎಐಎಡಿಎಂಕೆ ಗೆದ್ದ ಸ್ಥಾನಗಳನ್ನು ಸಹ ವಶಪಡಿಸಿಕೊಂಡು ಡಿಎಂಕೆ ಮುನ್ನಡೆ ಯಲ್ಲಿದೆ.   ಡಿಎಂಕೆ, ಕಾಂಗ್ರೆಸ್, ಸಿಪಿಎಂ, ಸಿ.ಪಿ.ಐ. ಮುಸ್ಲಿಂ ಲೀಗ್, ವಿ.ಸಿ.ಕೆ ಮತ್ತು ಮನಿದನೇಯ ಮಕ್ಕಳ್ ಪಕ್ಷ ಮುಂಚೂಣಿಯಲ್ಲಿದ್ದುಕೊಂಡು ಸ್ಪರ್ಧಿಸಿದವು. ಮುಂಚೂಣಿಯಲ್ಲಿರುವ ಇತರ ಪಕ್ಷಗಳಿಗೂ ಲಾಭವುಂಟಾಗಿದೆ.

Join Whatsapp
Exit mobile version