ಎಸ್.ಡಿ.ಪಿ.ಐ ಉಳ್ಳಾಲ ನಗರ ಸಮಿತಿ ವತಿಯಿಂದ ನಾಳೆ ನೂತನ ಕಚೇರಿ ಮತ್ತು ಮಾಹಿತಿ ಕೇಂದ್ರ ಲೋಕಾರ್ಪಣೆ

Prasthutha|

ತೊಕೊಟ್ಟು: ಎಸ್.ಡಿ.ಪಿ.ಐ ಪಕ್ಷದ ನೂತನ ಕಚೇರಿ ಮತ್ತು ಮಾಹಿತಿ, ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭವು ನಾಳೆ ಉಳ್ಳಾಲ ನಗರ ಸಭೆ ಕಚೇರಿ ಸಮೀಪದ ಇನ್ ಲ್ಯಾಂಡ್ ಕಟ್ಟಡದಲ್ಲಿ ಸಂಜೆ 4 ಗಂಟೆಗೆ ಸರಿಯಾಗಿ ನಡೆಯಲಿದೆ.

- Advertisement -

ಎಸ್.ಡಿ.ಪಿ.ಐ ಉಳ್ಳಾಲ ನಗರ ಸಮಿತಿ ವತಿಯಿಂದ ನಡೆಸುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಹೈಲ್ ಉಳ್ಳಾಲ, ಅಧ್ಯಕ್ಷರು, ಎಸ್.ಡಿ.ಪಿ.ಐ ಉಳ್ಳಾಲ ನಗರ ಸಮಿತಿ ವಹಿಸಲಿದ್ದಾರೆ. ಈ ವೇಳೆ ಪಕ್ಷದ ಕಚೇರಿಯನ್ನು ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಅವರು ಉದ್ಘಾಟಿಸಿದರೆ, ಮಾಹಿತಿ ಕೇಂದ್ರದ ಉದ್ಘಾಟನೆಯನ್ನು ದರ್ಗಾ ಸಮಿತಿಯ ಅಧ್ಯಕ್ಷರಾದ ರಶೀದ್ ಹಾಜಿ ಅವರು ನೆರವೇರಿಸಲಿದ್ದಾರೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಕ್ಷೇತ್ರಾಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ, ಅಥಾವುಲ್ಲಾ ಜೋಕಟ್ಟೆ, ಅಲ್ಫಾನ್ಸೋ ಫ್ರಾಂಕೋ, ರಿಯಾಝ್ ಪರಂಗಿಪೇಟೆ, ಬಿ.ಆರ್. ಬಾಸ್ಕರ್ ಪ್ರಸಾದ್, ಆನಂದ್ ಮಿತ್ತಬೈಲ್ ಸೇರಿದಂತೆ ತಾಲೂಕು, ಜಿಲ್ಲಾ , ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಹಲವಾರು ನಾಯಕರು ಭಾಗವಹಿಸಲಿದ್ದಾರೆಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

- Advertisement -

ಆದ್ದರಿಂದ ಎಸ್.ಡಿ.ಪಿ.ಐ ಉಳ್ಳಾಲ ನಗರ ಸಮಿತಿ ವತಿಯಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸುಹೈಲ್ ಉಳ್ಳಾಲ ಅವರು ವಿನಂತಿಸಿದ್ದಾರೆ.

Join Whatsapp
Exit mobile version