ಕೊಡಗು: ದೆಹಲಿಯ ಮಹಿಳಾ ಸಿವಿಲ್ ಡಿಫನ್ಸ್ ಅಧಿಕಾರಿ ರಾಬಿಯಾ ಸೈಫಿ ಅತ್ಯಾಚಾರ ಮತ್ತು ಬರ್ಬರ ಹತ್ಯಾ ಕೃತ್ಯದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮತ್ತು ತನಿಖೆಗೆ ವಿಶೇಷ ತಂಡವನ್ನು ರಚಿಸಿ ಹತ್ಯೆಯ ಹಿಂದಿನ ರಹಸ್ಯವನ್ನು ಬೇಧಿಸುವಂತೆ ಆಗ್ರಹಿಸಿ SDPI ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಕೊಡಗು ಜಿಲ್ಲಾಧ್ಯಕ್ಷರಾದ ಮನ್ಸೂರ್ ಅಲಿ,ಪ್ರ.ಕಾರ್ಯದರ್ಶಿ ಅಬ್ದುಲ್ಲ ಅಡ್ಕಾರ್,ಮಡಿಕೇರಿ ನಗರಸಭೆ ಸದಸ್ಯರಾದ ಬಶೀರ್ ಅಹಮದ್,ಮೇರಿ ವೇಗಸ್ ಹಾಗೂ ನೀಮ ಆರ್ಷದ್ ಉಪಸ್ಥಿತರಿದ್ದರು