ಬೆಳ್ತಂಗಡಿ : ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ | SDPI ವತಿಯಿಂದ ದೂರು ದಾಖಲು

Prasthutha|

ಪುಂಜಾಲಕಟ್ಟೆ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುಂಜಾಲಕಟ್ಟೆ ವತಿಯಿಂದ ಇತ್ತೀಚೆಗೆ ಶಿವಕುಮಾರ್ ಮೆಂದರ್ ಎನ್ನುವ ವ್ಯಕ್ತಿ ತನ್ನ ಫೇಸ್ಬುಕ್ ಖಾತೆಯಲ್ಲಿ ಮುಸ್ಲಿಂ ಸಂಘಟನೆಗಳ ಯುವಕರು ರಾಜ್ಯದಾಧ್ಯಂತ ನಡೆಸುತ್ತಿರುವ ಕೊರೋನಾದಿಂದ ಮೃತಪಟ್ಟ ವ್ಯಕ್ತಿಗಳ ಗೌರವಯುತ ಅಂತ್ಯಸಂಸ್ಕಾರದ ಬಗ್ಗೆ ಅವಹೇಳನಕಾರಿ ಮತ್ತು ಆಧಾರ ರಹಿತ ಸಂದೇಶ ರವಾನಿಸಿರುವುದರ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

ಈ ಸಂದರ್ಭದಲ್ಲಿ SDPI ಕುಕ್ಕಳ ಗ್ರಾಮ ಸಮಿತಿ ಕಾರ್ಯದರ್ಶಿ ಮಜೀದ್ ಪುಂಜಾಲಕಟ್ಟೆ ಹಾಗೂ ಹಫೀಝ್ ಮೂರ್ಜೆ ಉಪಸ್ಥಿತರಿದ್ದರು.

- Advertisement -