Home ಕರಾವಳಿ ಬ್ರಹ್ಮರಕೋಟ್ಲು ಟೋಲ್‌ಗೇಟ್ ಅವ್ಯವಸ್ಥೆ ವಿರುದ್ಧ SDPI ಉಗ್ರ ಹೋರಾಟ: ಇಲ್ಯಾಸ್ ತುಂಬೆ

ಬ್ರಹ್ಮರಕೋಟ್ಲು ಟೋಲ್‌ಗೇಟ್ ಅವ್ಯವಸ್ಥೆ ವಿರುದ್ಧ SDPI ಉಗ್ರ ಹೋರಾಟ: ಇಲ್ಯಾಸ್ ತುಂಬೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿಯ ಬ್ರಹ್ಮರಕೋಟ್ಲು ಎಂಬಲ್ಲಿ ಅವ್ಯವಸ್ಥೆಯ ಟೋಲ್ ಗೇಟ್ ವಿರುದ್ಧ ಎಸ್.ಡಿ.ಪಿ.ಪಕ್ಷ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದು ಎಸ್. ಡಿ.ಪಿ.ಐ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಇಲ್ಯಾಸ್ ತುಂಬೆ ಅವರು ತಿಳಿಸಿದರು.

ಈ ಹಿಂದೆ ಟೋಲ್ ಬಲವಂತವಾಗಿ ಸಂಗ್ರಹ ಮಾಡುತ್ತಿರಲಿಲ್ಲ, ಆದರೆ ಇತ್ತೀಚಿನ ಕೆಲ ದಿನಗಳಿಂದ ರೌಡಿಗಳ ಮೂಲಕ ಬಲವಂತವಾಗಿ ಟೋಲ್ ಸಂಗ್ರಹ ಮಾಡುವ ಕಾರ್ಯ ನಡೆಯುತ್ತಿದೆ. ಇದು ಖಂಡನೀಯ. ಟೋಲ್ ಸಂಗ್ರಹದ ಅವಧಿ ಮುಗಿದ ಬಳಿಕವೂ ಅನಧಿಕೃತವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಅವರು ಆರೋಪ ಮಾಡಿದರು.

ಈ ಟೋಲ್ ಗೇಟ್ ಆರಂಭವಾದ ಬಳಿಕ ಇಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿತ್ತು. ಆದರೆ ಇಲ್ಲಿ ಬೇಕಾದ ಯಾವುದೇ ಸೌಕರ್ಯಗಳನ್ನು ನೀಡದೆ ಬಲವಂತವಾಗಿ ಟೋಲ್ ಸಂಗ್ರಹ ಮಾಡುವ ಕಾರ್ಯ ಮಾಡಲಾಗುತ್ತಿದೆ. ಕಾನೂನು ಬಾಹಿರವಾಗಿ ಇವರು ಮಾಡುವ ಕೆಲಸ ಸರಿಯಲ್ಲ. ಟೋಲ್ ನ ಸಮೀಪ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿರುವವರಿಂದ ಟೋಲ್ ಸಂಗ್ರಹ ಮಾಡುವಂತಿಲ್ಲ. ಇಲ್ಲಿ ಸರಕಾರದ ಷರತ್ತುಗಳನ್ನು ಪಾಲನೆ ಮಾಡುತ್ತಿಲ್ಲ. ಆದರೆ ಅನಧಿಕೃತ ಟೋಲ್ ನಲ್ಲಿ ದುಡ್ಡು ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ನಿತ್ಯ ಇಲ್ಲಿ ಗಲಾಟೆ ನಡೆಯುತ್ತಿದ್ದು, ಇಲ್ಲಿನ ವ್ಯವಸ್ಥೆ ಸರಿಯಾಗದಿದ್ದರೆ ಇದರ ವಿರುದ್ದ ಎಸ್.ಡಿ.ಪಿ.ಪಕ್ಷ ಹೋರಾಟ ಮಾಡಲು ಮುಂದಾಗಿದೆ. ಅಕ್ರಮ ಸಕ್ರಮದ ಕಾಟ ತಾಳಲಾರದೆ ಈ ಹಿಂದಿನ ತಹಶಿಲ್ದಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಶಾಹುಲ್ ಹಮೀದ್ ಎಸ್.ಎಚ್, ಮೂನಿಷ್ ಅಲಿ, ಷರೀಫ್ ಉಪಸ್ಥಿತರಿದ್ದರು.

Join Whatsapp
Exit mobile version