Home ಕರಾವಳಿ ಸೌಹಾರ್ದತೆಗಾಗಿ 2984 ಕಿ.ಮಿ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿದ ಯುವಕರಿಗೆ ಎಸ್ ಡಿಪಿಐ ಸನ್ಮಾನ

ಸೌಹಾರ್ದತೆಗಾಗಿ 2984 ಕಿ.ಮಿ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿದ ಯುವಕರಿಗೆ ಎಸ್ ಡಿಪಿಐ ಸನ್ಮಾನ

ಬಂಟ್ವಾಳ: ದೇಶದ ಸೌಹಾರ್ದತೆಗಾಗಿ 2984 ಕಿ.ಮಿ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿದ ಉಪ್ಪಿನಂಗಡಿಯ ಯುವಕರಾದ ನೌಶಾದ್ ಬಿ.ಕೆ.ಎಸ್ ಮತ್ತು ಅಬ್ದುಲ್ ಹಕೀಂ ಅವರಿಗೆ ಬಂಟ್ವಾಳ ಕೈಕಂಬದ ಹೆದ್ದಾರಿ ಬಳಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.


ದೇಶದ ಸೌಹಾರ್ದತೆಗಾಗಿ ಉಪ್ಪಿನಂಗಡಿಯಿಂದ ಲಡಾಕ್ ವರೆಗೆ ಸುಮಾರು 2984 ಕಿ.ಮಿ ದೂರವನ್ನು ಕಾಲ್ನಡಿಗೆಯಲ್ಲಿ ಈ ಇಬ್ಬರು ಯುಕವರು ಕ್ರಮಿಸಿದ್ದು, ಪ್ರಯಾಣದುದ್ದಕ್ಕೂ ದೇಶ ಪ್ರೇಮ, ರಾಷ್ಟ ಧ್ವಜದ ಮಹತ್ವ, ಆಹಾರ ಪೋಲು,ಧಾರ್ಮಿಕ ಸೌಹಾರ್ದತೆ ಮುಂತಾದ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.


ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಸ್ ಡಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ರಿಯಾಝ್ ಫರಂಗಿಪೇಟೆಯವರು ಯುವಕರ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪಕ್ಷದ ಕ್ಷೇತ್ರ ಸಮಿತಿ ಕಾರ್ಯದರ್ಶಿ ಹಾಗೂ ಬಂಟ್ವಾಳ ಪುರಸಭೆಯ ಸದಸ್ಯರಾದ ಮುನೀಶ್ ಅಲಿ, ಜಿಲ್ಲಾ ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ, ಪುರಸಭಾ ಸಮಿತಿ ಅಧ್ಯಕ್ಷರಾದ ಶೆರೀಫ್.V, ಕಾರ್ಯದರ್ಶಿ ಇಕ್ಬಾಲ್ ಮೈನ್ಸ್, ಕ್ಷೇತ್ರ ಸಮಿತಿ ಸದಸ್ಯರಾದ ಇಕ್ಬಾಲ್ ನಂದರ ಬೆಟ್ಟು, ಎಸ್ ಡಿಟಿಯು ಟೆಂಪೋ ಚಾಲಕರ ಸಂಘದ ಅಧ್ಯಕ್ಷ ಅಶ್ರಫ್ ಕೊಡಂಗೆ, ಶಾಂತಿ ಅಂಗಡಿ ಬ್ರಾಂಚ್ ಅಧ್ಯಕ್ಷರಾದ ಇಸಾಕ್ ಅದ್ದೇಡಿ, ಬಶೀರ್ ಪಲ್ಲ, ಮಜೀದ್ ಆಲಡ್ಕ ಸಾಹುಲ್ ತಲಪಾಡಿ, ಅಶ್ರಫ್ ತಲಪಾಡಿ ಮತ್ತು ಇತರರು ಉಪಸ್ಥಿತರಿದ್ದರು.

Join Whatsapp
Exit mobile version