ಹುಣಸೂರು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ SDPI ತೆಕ್ಕೆಗೆ

Prasthutha|

ಮೈಸೂರು: ಹುಣಸೂರು ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಎಸ್ಡಿಪಿಐ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಸೈಯದ್ ಯೂನುಸ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹುಣಸೂರು ನಗರಸಭೆಯಲ್ಲಿ ಒಟ್ಟು 31 ಸದಸ್ಯ ಸ್ಥಾನದಲ್ಲಿ ಕಾಂಗ್ರೆಸ್ 14 ಜೆಡಿಎಸ್ 7 ಎಸ್ಡಿಪಿಐ 2 ಬಿಜೆಪಿ 3 ಸ್ವತಂತ್ರರು 5 ಸ್ಥಾನಗಳಲ್ಲಿ ವಿಜಯಿಯಾಗಿದ್ದರು.

ಇಂದು ನಡೆದ ನಗರಸಭೆಯ ಸಭೆಯಲ್ಲಿ ಹುಣಸೂರಿನ ಶಬ್ಬೀರ್ ನಗರದ 31 ನೇ ವಾರ್ಡಿನ SDPI ಕೌನ್ಸಿಲರ್ ಆಗಿರುವ ಸೈಯದ್ ಯೂನುಸ್ ಅವರು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

- Advertisement -