Home ಟಾಪ್ ಸುದ್ದಿಗಳು ಈ ಚುನಾವಣೆ ನಿರಂಕುಶವಾದ ಮತ್ತು ಪ್ರಜಾಪ್ರಭುತ್ವದ ನಡುವಿನ ಅಂತಿಮ ಹೋರಾಟ :ಅನ್ವರ್ ಸಾದತ್

ಈ ಚುನಾವಣೆ ನಿರಂಕುಶವಾದ ಮತ್ತು ಪ್ರಜಾಪ್ರಭುತ್ವದ ನಡುವಿನ ಅಂತಿಮ ಹೋರಾಟ :ಅನ್ವರ್ ಸಾದತ್

ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಮತದಾನ ನಮ್ಮೆಲ್ಲರ ಹಕ್ಕು, ಮತದಾರರೇ ಈ ದೇಶದ ನೈಜ ಪ್ರಭುಗಳು,ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬ ಆದ್ದರಿಂದ ನಾಳೆ ನಡೆಯುವ ಸಾರ್ವರ್ತಿಕ ಚುನಾವಣೆಯು ನಿರಂಕುಶವಾದ ಮತ್ತು ಡೆಮೋಕ್ರೆಸಿ ನಡುವಿನ ಅಂತಿಮ ಹೋರಾಟ. ಸಂವಿದಾನವನ್ನು ಉಳಿಸಿಲು ಫ್ಯಾಸಿಸಂ ಮತ್ತು ಸರ್ವಾಧಿಕಾರವನ್ನು ಸೋಲಿಸಲು , ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಜಿಲ್ಲೆಯ ಎಲ್ಲಾ ವರ್ಗದ ಪ್ರಜ್ಞಾವಂತ ಮತದಾರರು ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ತಮ್ಮ ಸಂವಿದಾನ ಬದ್ಧವಾದ ಹಕ್ಕನ್ನು ನಿರ್ಬೀತಿಯಿಂದ ಚಲಾಯಿಸುವುದರೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನದಲ್ಲಿ ಭಾಗವಹಿಸುವಂತೆ SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಜಿಲ್ಲೆಯ ಜನತೆಗೆ ಕರೆ ನೀಡಿದ್ದಾರೆ.

ಫ್ಯಾಸಿಸಂ ವಿಚಾರಧಾರೆಯ ಸರ್ವಾಧಿಕಾರಿ ವ್ಯವಸ್ಥೆಯ ಕರಾಳ ಆಡಳಿತವು ದೇಶವನ್ನು ಕಳೆದ ಹತ್ತು ವರ್ಷಗಳಲ್ಲಿ ಅತೀ ಅಪಾಯಕಾರಿ ಹಂತಕ್ಕೆ ತಂದು ನಿಲ್ಲಿಸಿದೆ. ಎರಡು ಅವಧಿಯಲ್ಲಿ ದೇಶವನ್ನು ಆಳಿದ ಮೋದಿ ನೇತೃತ್ವದ ಬಿಜೆಪಿ ಸರಕಾರದ ರಾಜಕೀಯ ಅಜೆಂಡಾಗಳು ದೇಶದ ಜನರನ್ನು ಭ್ರಮೆ ಮತ್ತು ಭೀತಿಯಲ್ಲಿ ತೇಲಾಡುವಂತೆ ಮಾಡಿದೆ, ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರಕಾರ ಧರ್ಮ ಮತ್ತು ಮೌಢ್ಯದ ಅಫೀಮನ್ನು ಜನಸಾಮಾನ್ಯರ ಮೆದುಳಿಗೆ ಇಂಜೆಕ್ಟ್ ಮಾಡಿ ದೇಶಾದ್ಯಂತ ಧರ್ಮದ ಹೆಸರಿನಲ್ಲಿ ಅಳಿಸಲಾಗದ ಗಾಯವನ್ನು ಮಾಡಿದೆ. ಜಗತ್ತಿಗೆ ಧರ್ಮ ಸಹಿಷ್ಣತೆಯ ಸಂದೇಶ ನೀಡಿದ ದೇಶವಿಂದು ಧಾರ್ಮಿಕ ಅಸಹಿಷ್ಣತೆ ಮತ್ತು ಜನಾಂಗೀಯ ಕಲಹದ ಕೇಂದ್ರ ಸ್ಥಾನವಾಗಿದೆ. ಜಾತ್ಯತೀತತೆ, ಸಹಬಾಳ್ವೆ, ಸಹೋದರತೆ, ಸಮಾನತೆಯ ಪೀಠಿಕೆ ಹೊಂದಿರುವ ಭಾರತದ ಸುಂದರ ಸಂವಿದಾನವನದ ಆಶಯಗಳನ್ನು ಬಿಜೆಪಿ ಸರಕಾರವು ಹಂತ ಹಂತವಾಗಿ ದುರ್ಬಲ ಗೊಳಿಸಿ ದೇಶವನ್ನು ನಿರಂಕುಶವಾದಿ ಆಡಳಿತ ವ್ಯವಸ್ಥೆಯತ್ತ ಕೊಂಡೊಯ್ಯುತ್ತಿದೆ, ಮನುವಾದಿ ಸಿದ್ದಂತವಾದ ಕೇಂದ್ರೀಕೃತ ಆಡಳಿತವನ್ನು ಜಾರಿಗೆ ತರುವ ದೂರ ದ್ರಷ್ಟಿಯೊಂದಿಗೆ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲ ಗೊಳಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದೆ, ತನ್ನ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಸರಕಾರವು ತನಿಖಾ ಸಂಸ್ಥೆಗಳನ್ನು ಉಪಯೋಗಿಸಿ ಸದೆ ಬಡಿಯುತ್ತಿದ್ದರೆ ಸರಕಾರದ ದೋರಣೆಯನ್ನು ಪ್ರಶ್ನಿಸುವ ಹೋರಾಟಗಾರರ ಮೇಲೆ ಕರಾಳ ಕಾನೂನು ಬಳಸಿ ಜೈಲಿಗೆ ಕಳಿಸುತ್ತಿದೆ. ಇನ್ನೊಂದು ಸಲ ದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ದೇಶದ ಸಂವಿಧಾನವನ್ನೇ ಬದಲಾಯಿಸುವ ಎಲ್ಲಾ ಮುನ್ಸೂಚನೆಗಳು ಗೋಚರಿಸುತ್ತಿದೆ ಎಂದು ಹೇಳಿದ್ದಾರೆ.

Join Whatsapp
Exit mobile version