Home ಕರಾವಳಿ ರಸ್ತೆ ಕಾಮಗಾರಿ ಮತ್ತು ಮಳೆ ಆರಂಭ | ವಿದ್ಯಾರ್ಥಿಗಳು, ನಿತ್ಯ ಪ್ರಯಾಣಿಕರ ಸಮಸ್ಯೆಗಳಿಗೆ ತುರ್ತು ಪರಿಹಾರ...

ರಸ್ತೆ ಕಾಮಗಾರಿ ಮತ್ತು ಮಳೆ ಆರಂಭ | ವಿದ್ಯಾರ್ಥಿಗಳು, ನಿತ್ಯ ಪ್ರಯಾಣಿಕರ ಸಮಸ್ಯೆಗಳಿಗೆ ತುರ್ತು ಪರಿಹಾರ ಕೈಗೊಳ್ಳಿ : SDPI ಆಗ್ರಹ

ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಹೊಡೆದುರುಳಿಸಿದ ಬಸ್ ತಂಗುದಾಣಗಳ ಬದಲಾಗಿ ತಾತ್ಕಾಲಿಕ ಬಸ್ ತಂಗುದಾಣಗಳನ್ನು ಶೀಘ್ರವೇ ನಿರ್ಮಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಜೇಶ್ವರ ಮಂಡಲ ಕಾರ್ಯದರ್ಶಿ ಶರೀಫ್ ಪಾವೂರು ಆಗ್ರಹಿಸಿದರು.

 ವಿದ್ಯಾರ್ಥಿಗಳು, ಮಹಿಳೆಯರು , ವೃದ್ಧರು ಮತ್ತು ಚಿಕ್ಕ ಮಕ್ಕಳೂ ಸೇರಿದಂತೆ ಮಳೆಗಾಲದಲ್ಲಿ ಸುರಕ್ಷಿತವಾಗಿ ಬಸ್ ನಿಲ್ದಾಣಗಳಲ್ಲಿ ಬಸ್ಸಿಗಾಗಿ ಕಾಯುವವರಿಗೆ ತಂಗಲು ಬೇಕಾದ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ULCC ಅಧಿಕಾರಿಗಳು ಮಾಡಬೇಕೆಂದು ಸಭೆಯಲ್ಲಿ ಅಭಿಪ್ರಾಯ ಪಡಲಾಯಿತು.

 ಸಭೆಯಲ್ಲಿ ಪಕ್ಷದ ಮಂಜೇಶ್ವರ ಮಂಡಲ ಉಪಾಧ್ಯಕ್ಷ ರಶೀದ್ ಗಾಂಧಿನಗರ, ಕೋಶಾಧಿಕಾರಿ ಜಲೀಲ್ ಉಪ್ಪಳ, ಜೊತೆ ಕಾರ್ಯದರ್ಶಿ ತಾಜು ಉಪ್ಪಳ ಹಾಗೂ ಸಮಿತಿ ಸದಸ್ಯ ಆರಿಫ್ ಖಾದರ್ ಮೊದಲಾದವರು ಭಾಗವಹಿಸಿದರು.
Join Whatsapp
Exit mobile version