ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ PFI ಕಚೇರಿಗಳಿಗೆ ಬೀಗ ಹಾಕಲಾಗಿದ್ದು, ಇದರ ಜೊತೆ SDPI ಕಚೇರಿಗಳಿಗೂ ದಾಳಿ ನಡೆಸಿ ಬೀಗ ಹಾಕಿರುವುದಕ್ಕೆ ಎಸ್ ಡಿಪಿಐ ಗರಂ ಆಗಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಎಸ್ ಡಿಪಿಐ ಕರ್ನಾಟಕ, ಡಿಜಿಪಿ ಅವರೇ SDPI ಚುನಾವಣಾ ಆಯೋಗದಲ್ಲಿ ನೋಂದಾಯಿತ ಪಕ್ಷ ಎಂಬುದು ರಾಜ್ಯ ಪೊಲೀಸ್ ಇಲಾಖೆಗೆ ಗೊತ್ತಿರಬೇಕು. ಮಾಹಿತಿಯ ಕೊರತೆ ಇದೆಯೇ ಗೊತ್ತಿಲ್ಲ.
ರಾಜ್ಯದ ಹಲವು ಭಾಗದಲ್ಲಿ PFI ಕಚೇರಿಗಳ ಜೊತೆ SDPI ಕಚೇರಿಗಳಿಗೆ ದಾಳಿ ನಡೆಸಿ ಬೀಗ ಜಡಿಯಲಾಗಿದೆ. ಕೂಡಲೇ SDPI ಕಚೇರಿಗಳನ್ನು ತೆರೆದು ಕೊಡಲು ಆದೇಶಿಸಲು ವಿನಂತಿಸುತ್ತಿದ್ದೇವೆ ಎಂದು ಟ್ವೀಟ್ ಮೂಲಕ ಆಗ್ರಹಿಸಿದೆ.