Home ಕರಾವಳಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬಜೆಟ್ ನಲ್ಲಿ ಹತ್ತು ಸಾವಿರ ಕೋಟಿ ಮೀಸಲಿಡಲಿ: ಎಸ್.ಡಿ.ಪಿ.ಐ ಆಗ್ರಹ

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬಜೆಟ್ ನಲ್ಲಿ ಹತ್ತು ಸಾವಿರ ಕೋಟಿ ಮೀಸಲಿಡಲಿ: ಎಸ್.ಡಿ.ಪಿ.ಐ ಆಗ್ರಹ

ಮಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನಲ್ಲಿ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕನಿಷ್ಠ ಹತ್ತು ಸಾವಿರ ಕೋಟಿಯನ್ನು ಮೀಸಲಿಡಲಿ ಎಂದು ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಆಗ್ರಹಿಸಿದರು.

ಇಂದು ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಸರ್ಕಾರ ಜನಪರವಾದ ಬಜೆಟ್ ಮಂಡಿಸುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಮಂಡಿಸಲಿರುವ ಬಜೆಟ್ ಜನಸಾಮಾನ್ಯರ ಪರವಾಗಿರಲಿ. ಈ ಬಜೆಟ್ ರಾಜ್ಯದ ಜನತೆಯ ಹಕ್ಕು, ಮೂಲಭೂತ ಸೌಕರ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುವಂತಾಗಲಿ ಎಂದು ಸರ್ಕಾರವನ್ನು ಆಗ್ರಾಹಿಸಿದ್ದಾರೆ.

ಮಾತ್ರವಲ್ಲ ಪ್ರತಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ, ನುರಿತ ವೈದ್ಯರ ನೇಮಕ ಮತ್ತು ಗುತ್ತಿಗೆ ಸಿಬ್ಬಂದಿಗಳನ್ನು ಖಾಯಂ ಆಗಿ ನೇಮಕಗೊಳಿಸಲಿ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕನಿಷ್ಠ ಸಾವಿರ ಕೋಟಿ ಮೀಸಲಿಡಬೇಕು. ಉರ್ದು ಭಾಷೆಯಲ್ಲಿ ಉತ್ತೇಜಿಸಲು ಉತ್ತರ ಕನ್ನಡದಲ್ಲಿ ಉರ್ದು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿ ಎಂದು ರಿಯಾಝ್ ಕಡಂಬು ಆಗ್ರಹಿಸಿದರು.

ಬಡ, ಮಧ್ಯಮ , ಪರಿಶಿಷ್ಟ ಜಾತಿ ಮತ್ತು ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಕ್ಷೇಯಾಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಬೇಕಾಗಿದೆ. ಈ ಮೊದಲು ಜಾತಿವಾರು ಜನಗಣತಿಗಾಗಿ ಮೀಸಲಿಟ್ಟ ಮೊತ್ತವನ್ನು ಪಾರದರ್ಶಿಕವಾಗಿ ಬಳಸಿ ಜಾತಿವಾರು ಜನಗಣತಿ ಪೂರ್ತಿಗೊಳಿಸಿ ರಾಜ್ಯದ ಜನತೆಯ ಶೈಕ್ಷಣಿಕ, ಸಾಮಾಜಿಕ ಕಲ್ಯಾಣಕ್ಕಾಗಿ ಮುತುವರ್ಜಿ ವಹಿಸಲಿ ಎಂದು ಅವರು ಆಗ್ರಹಿಸಿದರು.

ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯದ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ವಿಶೇಷ ಅನುದಾನವನ್ನು ಮೀಸಲಿಡಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ಅವರು ಸರ್ಕಾರವನ್ನು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಜಿಲ್ಲಾ ಕಾರ್ಯದರ್ಶಿಗಳಾದ ಶಾಕಿರ್ ಅಳಕೆಮಜಲು, ಸುಹೈಲ್ ಖಾನ್, ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಐ.ಎಮ್.ಆರ್ ಉಪಸ್ಥಿತರಿದ್ದರು.

Join Whatsapp
Exit mobile version