ಸೌದಿ ಅರೇಬಿಯಾ ದ ಜೀಝನ್ ನಲ್ಲಿ ಸಂಶಯಾಸ್ಪದ ರೀತಿಯಲ್ಲಿ.ಮರಣ ಹೊಂದಿದ ಎಲೆಕ್ಟ್ರಿಷಿಯನ್ ರೋನಾಲ್ಡ್ ಡಿ ಸೋಜಾ ಅವರ ಮನೆಗೆ SDPI ನಿಯೋಗ ಭೇಟಿ ನೀಡಿದೆ.
ಮಾರ್ಚ್ 19 ರಂದು ಮೃತಪಟ್ಟ ರೋನಾಲ್ಡ್ ಡಿ ಸೋಜಾ ಅವರ ಪಾರ್ಥಿವ ಶರೀರವನ್ನು ಇಂಡಿಯನ್ ಸೋಶಿಯಲ್ ಫಾರಂ ಇದರ ಸದಸ್ಯರು ಭಾರತಕ್ಕೆ ರವಾನೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ವೇಳೆ SDPI ಉಳ್ಳಾಲ ನಗರ ಸಮಿತಿ ಅಧ್ಯಕ್ಷರಾದ ಅಬ್ಬಾಸ್ AR ಅವರ ನೇತೃತ್ವದ ತಂಡವು ಮೃತ ರೋನಾಲ್ಡ್ ರವರ ಮನೆಗೆ ಭೇಟಿ ನೀಡಿ ಮೃತರ ಮನೆಯವರಿಗೆ ಸಾಂತ್ವಾನ ನೀಡಿ ಧೈರ್ಯ ತುಂಬಿ ಮೃತರ ಶರೀರವನ್ನು ಆದಷ್ಟು ಬೇಗನೆ ಮನೆಗೆ ತಲುಪಿಸಲು ಬೇಕಾದ ಎಲ್ಲಾ ಏರ್ಪಾಡನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ತಂಡದಲ್ಲಿ SDPI ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಅಬ್ಬಾಸ್ AR, ಉಪಾಧ್ಯಕ್ಷ ರೌಫ್ ಹಳೇಕೋಟೆ, ಕಾರ್ಯದರ್ಶಿ ಇಮ್ತಿಯಾಜ್ ಪಿಲಾರ್, ಉಳ್ಳಾಲ ನಗರ ಸಭೆ ಕೌನ್ಸಿಲರ್ ಝರೀನಾ ರೌಫ್, SDPI ನಾಯಕರಾದ ಇಮ್ತಿಯಾಜ್ ಕೋಟೆಪುರ,ಝಕೀರ್ ಉಳ್ಳಾಲ, ಸಾದಿಕ್ ಉಳ್ಳಾಲ ಹಾಗೂ ಉಳ್ಳಾಲ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ ಪಾಲ್ಗೊಂಡಿದ್ದರು