Home ಕರಾವಳಿ ಸಂಘ ಪರಿವಾರದ ಕಿಡಿಗೇಡಿಗಳಿಂದ ದಾಳಿಗೊಳಗಾದ ಕ್ರೈಸ್ತ ಧರ್ಮದ ಪ್ರಾರ್ಥನಾ ಮಂದಿರಕ್ಕೆ SDPI ನಿಯೋಗ ಭೇಟಿ

ಸಂಘ ಪರಿವಾರದ ಕಿಡಿಗೇಡಿಗಳಿಂದ ದಾಳಿಗೊಳಗಾದ ಕ್ರೈಸ್ತ ಧರ್ಮದ ಪ್ರಾರ್ಥನಾ ಮಂದಿರಕ್ಕೆ SDPI ನಿಯೋಗ ಭೇಟಿ

ಕಡಬ: ಕಡಬ ತಾಲೂಕಿನ ರೆಂಜಲಾಡಿ ಗ್ರಾಮದ ಪೇರಡ್ಕದಲ್ಲಿ  ಇತ್ತೀಚೆಗೆ ಸಂಘಪರಿವಾರದ ಕಿಡಿಗೇಡಿಗಳಿಂದ ದಾಳಿಗೊಳಗಾದ ಇಮ್ಯಾನ್ಯುಯೆಲ್ ಅಸೆಂಬ್ಲಿ ಆಫ್ ಗಾಡ್ ಎಂಬ  ಕ್ರೈಸ್ತ ಧರ್ಮದ ಪ್ರಾರ್ಥನಾ ಮಂದಿರಕ್ಕೆ SDPI ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರೂ , ರೈತ ಮುಖಂಡರು ಆದ ವಿಕ್ಟರ್ ಮಾರ್ಟೀಸ್ ರವರ ನೇತೃತ್ವದ ನಿಯೋಗವು ಇಂದು ಭೇಟಿನೀಡಿ ಅಲ್ಲಿನ ಧರ್ಮ ಗುರುಗಳಾದ  ಫಾದರ್ ಜೋಸ್ ವರ್ಗೀಸ್ ಹಾಗೂ ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಿದರು.

 ಧರ್ಮ ಮಂದಿರಗಳ ಮೇಲೆ ಇತ್ತೀಚೆಗೆ ಫ್ಯಾಸಿಸ್ಟ್ ಶಕ್ತಿಗಳು ನಡೆಸುತ್ತಿರುವ ದಾಳಿಗಳು ಮಿತಿಮೀರುತ್ತಿದ್ದು ಸರಕಾರದ ಹಾಗೂ ಜನಪ್ರತಿನಿಧಿಗಳ ಮೌನವೇ ದುಷ್ಟ ಶಕ್ತಿಗಳಿಗೆ ಇಂತಹ ಕ್ರತ್ಯ ನಡೆಸಲು ಸಹಕಾರಿಯಾಗುತ್ತಿದೆ. ರಾಜ್ಯದಲ್ಲಿ ಬೊಮ್ಮಾಯಿ ಸರಕಾರ ಬಂದ ನಂತರ ಉತ್ತರ ಪ್ರದೇಶದ ರೀತಿಯಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ನಡೆಯುತ್ತಿದ್ದು ಇದನ್ನ ಪ್ರಜಾಸತ್ತಾತ್ಮಕ ರೀತಿಯಲ್ಲಿ ಎದುರಿಸಲು SDPI ಸನ್ನದ್ದವಾಗಿದೆ . 

ಅದ್ದರಿಂದ ಯಾವುದೇ ಕಾರಣಕ್ಕೂ ಇಂತಹ ಹೇಡಿಗಳ ದಾಳಿಯಿಂದ ಯಾರು ಭಯಪಡದೇ ಇವರ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ನಡೆಸಬೇಕು SDPI ಇದಕ್ಕಾಗಿ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಘಟನೆಗೆ ಸಂಬಂಧಿಸಿದಂತೆ  ಕಡಬ ಠಾಣಾಧಿಕಾರಿಗೆ ದೂರು ನೀಡಲಾಯಿತು.

ಭೇಟಿನೀಡಿದ ನಿಯೋಗದಲ್ಲಿ ಕಡಬ ಬ್ಲಾಕ್ SDPI ಅಧ್ಯಕ್ಷರಾದ ಬಶೀರ್ ಆತೂರು, ಕಾರ್ಯದರ್ಶಿ ನಬಿಶಾನ್ ಕಡಬ ಹಾಗೂ ಸ್ಥಳೀಯ ಮುಖಂಡರಾದ ನೌಶಾದ್ ಕಡಬ , ನವಾಝ್, ಹಾರಿಸ್ ಕಳಾರ, ಆರಿಫ್ ಕೂಯಿಲ ಉಪಸ್ಥಿತರಿದ್ದರು

Join Whatsapp
Exit mobile version