ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ನಾಯಕರು ಬುಧವಾರ ಬೆಂಗಳೂರಿನ ಆರ್ಚ್ ಬಿಷಪ್ ಅವರನ್ನು ಬೇಟಿ ಮಾಡಿ, ಮತಾಂತರ ನಿಷೇಧ ಕಾಯ್ದೆ, ಚರ್ಚ್ ಗಳ ಮೇಲಿನ ಅವ್ಯಾಹತ ದಾಳಿ, ಜಾತಿ ದೌರ್ಜನ್ಯ ಹಾಗು ಆಹಾರ ಸಂಸ್ಕೃತಿಯ ಮೇಲಿನ ಅಸಹನೆಗಳನ್ನು ಎದುರಿಸಿ ನಿಲ್ಲುವ ಕುರಿತಂತೆ ಚರ್ಚೆ ನಡೆಸಿದರು.
ಕ್ರೈಸ್ತರು ಒಂಟಿಯಲ್ಲ. ಅವರ ಜೊತೆ ದಲಿತರು, ಮುಸ್ಲಿಮರೂ ಇದ್ದೇವೆ ಎಂದು SDPI ನ ಪರವಾಗಿ ತಿಳಿಸಲಾಯಿತು ಮತ್ತು ಮುಂದಿನ ದಿನಗಳಲ್ಲಿ ದಲಿತ ಹಾಗು ಮುಸ್ಲಿಮರ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲಿ ಕ್ರೈಸ್ತರು ಇರುತ್ತಾರೆ ಎಂದು ಬಿಷಪ್ ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವ ಕೋಮುವಾದಿ ಹಾಗು ಜಾತಿವಾದಿಗಳ ವಿರೋಧಿ ಚಳುವಳಿಗಳಲ್ಲಿ ಪರಸ್ಪರ ಜೊತೆಯಾಗಿ ನಿಲ್ಲುವ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಲಾಯಿತು.
ನಿಯೋಗದಲ್ಲಿ ಎಸ್ ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ಡಾ. ಮೆಹಬೂಬ್ ಆವಾದ್ ಶರೀಫ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್, ಬೆಂಗಳೂರು ಜಿಲ್ಲಾ ಸಮಿತಿ ಸದಸ್ಯ ಅಡ್ವೊಕೇಟ್ ವಸೀಂ ಉಪಸ್ಥಿತರಿದ್ದರು.