Home ಕರಾವಳಿ ಪಟ್ಟಾಭಿರಾಮ ಸೋಮಯಾಜಿ ನಿಧನಕ್ಕೆ SDPI ಸಂತಾಪ

ಪಟ್ಟಾಭಿರಾಮ ಸೋಮಯಾಜಿ ನಿಧನಕ್ಕೆ SDPI ಸಂತಾಪ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು, ಚಿಂತಕರು, ಲೇಖಕರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಆದ ಶ್ರೀಯುತ ಪಟ್ಟಾಭಿರಾಮ ಸೋಮಯಾಜಿಯವರ ನಿಧನಕ್ಕೆ SDPI ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪಟ್ಟಾಭಿರಾಮರವರು ಓರ್ವ ಪ್ರಾಧ್ಯಾಪಕರಾಗಿ ಸರಕಾರಿ ಉದ್ಯೋಗದಲ್ಲಿ ಇರುವಾಗಲೂ ಸರಕಾರದ ಜನವಿರೋಧಿ ಹಾಗೂ ಫ್ಯಾಸಿಸಂ ಅಜೆಂಡಾಗಳನ್ನು ಬಹಿರಂಗವಾಗಿ ವಿರೋಧಿಸುವ ಮೂಲಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಫ್ಯಾಸಿಸಂ ಚಿಂತನೆಗಳ ಕಟ್ಟಾ ವಿರೋಧಿಯಾಗಿದ್ದ ಪಟ್ಟಾಭಿರಾಮರವರು ಜಿಲ್ಲೆಯಲ್ಲಿ ಸಂಘಪರಿವಾರದ ವಿರುದ್ಧದ ಗಟ್ಟಿ ಧ್ವನಿಯಾಗಿದ್ದರು, ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಇವರು ಉತ್ತಮ ಲೇಖಕರು ಆಗಿದ್ದರು, ಸಮಾಜ ವಿರೋಧಿ, ಕೋಮುವಾದಿ ಶಕ್ತಿಗಳಿಂದ ನಿರಂತರ ಬೆದರಿಕೆಗಳು, ದಾಳಿ ನಡೆದರೂ ಎಲ್ಲೂ ಎದೆಗುಂದದೆ ಅದರ ವಿರುದ್ಧ ಹೋರಾಟಗಳು ಮತ್ತು ತೀಕ್ಷ್ಣವಾದ ಬಾಷಣಗಳ ಮೂಲಕ ವಿಧ್ವಂಸಕ ಶಕ್ತಿಗಳನ್ನು ಎದುರಿಸುತ್ತಿದ್ದ ಪ್ರಗತಿಪರ ಚಿಂತಕರಲ್ಲಿ ಮುಂಚೂಣಿಯಲ್ಲಿ ಇದ್ದಂತಹ ವ್ಯಕ್ತಿ ಪಟ್ಟಾಭಿಷೇಕ ಸೋಮಯಾಜಿಯವರು. ಇವರ ನಿಧನವು ಪ್ರಗತಿಪರ ಹಾಗೂ ಸಂವಿಧಾನ ಪರ ಹೋರಾಟದ ರಂಗಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ ಎಂದು ತಿಳಿಸಿದ್ದಾರೆ.

 SDPI ಪಕ್ಷದ ಓರ್ವ ಹಿತೈಷಿ ಕೂಡಾ ಆಗಿದ್ದ ಪಟ್ಟಾಭಿರಾಮರವರು ಪಕ್ಷಕ್ಕೆ ಹಲವಾರು ಸಂದರ್ಭದಲ್ಲಿ  ಸೂಕ್ತವಾದ ಸಲಹೆಗಳನ್ನು ನೀಡುತ್ತಿದ್ದರು ಮತ್ತು ನಮ್ಮ ಬಹಳಷ್ಟು ಹೋರಾಟಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಇವರ ಮರಣದಿಂದ ಕರಾವಳಿಯ ಹೋರಾಟ ರಂಗ ಬಡವಾಗಿದೆ, ಇವರ ಹೋರಾಟದ ಚಿಂತನೆಗಳನ್ನು ಮುಂದುವರೆಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ದಾಂಜಲಿ ಎಂದು ಅನ್ವರ್ ಸಾದತ್ ತಮ್ಮ ಶೋಕ ಸಂದೇಶದಲ್ಲಿ ಕಂಬನಿ ಮಿಡಿದಿದ್ದಾರೆ

Join Whatsapp
Exit mobile version