Home ಕರಾವಳಿ ಪುತ್ತೂರು ಬೀದಿಬದಿ ವ್ಯಾಪಾರಸ್ಥರ ಮಳಿಗೆ ಧ್ವಂಸ | SDPI ಖಂಡನೆ

ಪುತ್ತೂರು ಬೀದಿಬದಿ ವ್ಯಾಪಾರಸ್ಥರ ಮಳಿಗೆ ಧ್ವಂಸ | SDPI ಖಂಡನೆ

► ನಗರಸಭೆ ವತಿಯಿಂದಲೇ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹ

ಪುತ್ತೂರು, ಜು 23:- ನಗರದಲ್ಲಿ ಬೆಳ್ಳಂಬೆಳಗ್ಗೆ ಪುತ್ತೂರು ನಗರಸಭೆ ನೇತೃತ್ವದಲ್ಲಿ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಮಳಿಗೆಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿದ್ದ ಬಡವರ ಮಳಿಗೆಗಳನ್ನು ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಧ್ವಂಸಗೊಳಿಸಿದ ನಗರಸಭೆಯ ಕಾರ್ಯ ವೈಖರಿಯು ಖಂಡನಾರ್ಹ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ನಗರ ಸಮಿತಿ ಅಧ್ಯಕ್ಷ ಕೆ.ಎಚ್ ಯಹ್ಯಾ ಕೂರ್ನಡ್ಕ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಸಕ್ತ ಲಾಕ್ ಡೌನ್ ನಿಂದಾಗಿ ಜನಸಾಮಾನ್ಯರು ಕೆಲಸ ವಿಲ್ಲದೆ,ವ್ಯಾಪಾರಸ್ಥರು ವ್ಯಾಪಾರ ವಿಲ್ಲದೆ ಕಂಗಾಲಾಗಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಅಂಗಡಿಗಳನ್ನಿಟ್ಟು ಅಲ್ಪಸ್ವಲ್ಪ ಪ್ರಮಾಣದಲ್ಲಿ ಬರುತ್ತಿದ್ದ ಆದಾಯದಿಂದ ಜೀವನ ಸಾಗಿಸುತ್ತಿದ್ದ ಬಡವರ ಮಳಿಗೆಗಳನ್ನು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವುಗೊಳಿಸಿ ಬೀದಿ ಬದಿ ವ್ಯಾಪಾರಿಗಳ ಕುಟುಂಬದ ಅನ್ನಕ್ಕೆ ಕಲ್ಲು ಹಾಕಿದ ನಗರಸಭೆಯ ಕೃತ್ಯವೂ ಖೇದಕರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಅದನ್ನು ತೆರವು ಗೊಳಿಸುವಾಗ ಜನರ ಸಮಸ್ಯೆಗಳನ್ನು, ಸಮಯ ಸಂದರ್ಭಗಳನ್ನು ಹಾಗೂ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕಿತ್ತು. ಅದೇ ರೀತಿಯಲ್ಲಿ ತೆರವುಗೊಳಿಸುವಾಗ ಬಡವರ ಮಳಿಗೆಗಳನ್ನು ಮಾತ್ರವಲ್ಲದೆ ದೊಡ್ಡ ದೊಡ್ಡ ಉದ್ಯಮಿಗಳ ಅಕ್ರಮ ಕಟ್ಟಡಗಳು ಕಣ್ಣಿಗೆ ಕಾಣದೇ ಇರುವ ಹಿಂದಿನ ಉದ್ದೇಶವೇನು ಎಂಬುದನ್ನು ನಗರಸಭೆ ಅಧಿಕಾರಿಗಳು ಸ್ಪಷ್ಟಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಳಿಗೆಗಳ ತೆರವಿನಿಂದ ಕಂಗಾಲಾಗಿರುವ ಸಣ್ಣಪುಟ್ಟ ಬೀದಿ ಬದಿ ವ್ಯಾಪಾರಿಗಳಿಗೆ ಕೂಡಲೇ ನಗರಸಭೆಯ ವತಿಯಿಂದಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ನಗರ ಸಮಿತಿ ಅಧ್ಯಕ್ಷ ಕೆ.ಎಚ್ ಯಹ್ಯಾ ಕೂರ್ನಡ್ಕ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ

Join Whatsapp
Exit mobile version