ಸುಹೈಲ್ ಕಂದಕ್ ಬಂಧನಕ್ಕೆ SDPI ಖಂಡನೆ

Prasthutha|

ಮಂಗಳೂರು : ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಬಂಧನವನ್ನು SDPI ತೀವ್ರವಾಗಿ ಖಂಡಿಸಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಹಗಲು ದರೋಡೆ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟಿಸಿದ್ದ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಬಂಧನ ಖಂಡನಾರ್ಹ. ಮಂಗಳೂರು ಪೊಲೀಸ್ ಆಯುಕ್ತರೇ ಎಲ್ಲಾ ದೂರಿಗೂ ಬಂಧಿಸುವುದಾದರೆ SDPI ಕರ್ನಾಟಕ ದಾಖಲಿಸಿದ ಹಲವಾರು ದೂರುಗಳಿವೆ, ಅದರಲ್ಲಿ ಹೆಸರಿಸಿದ ಆರೋಪಿಗಳನ್ನು ಬಂಧಿಸುವಿರಾ? ಎಂದು SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

- Advertisement -

SDPI ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಟ್ವೀಟ್ ಮಾಡಿ, ಕೋವಿಡ್ ಬಿಕ್ಕಟ್ಟು ನಿಯಂತ್ರಿಸಲು ವಿಫಲವಾಗಿರುವ ಬಿಜೆಪಿ ಸರಕಾರವು ಕೋವಿಡ್ ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಾಯಕರನ್ನು ಬಂಧಿಸುತ್ತಿರುವುದು ಬಿಜೆಪಿಯ ದ್ವೇಷ ರಾಜಕೀಯದ ಪ್ರದರ್ಶನವಾಗಿದೆ ಎಂದು ಟೀಕಿಸಿದ್ದಾರೆ.




ಈ ಕುರಿತು ಟ್ವೀಟ್ ಮಾಡಿದ SDPI ದಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಆಸ್ಪತ್ರೆಗಳೆಂದರೆ ಮಾನವೀಯತೆ,ಅದಿಲ್ಲದೆ ವ್ಯಾಪಾರ ಮಾಡಲು ಹೊರಟಿರುವ ಕೆಲ ವೈದ್ಯರ ಮತ್ತು ಆಸ್ಪತ್ರೆಗಳ ವ್ಯಾಪಾರಕ್ಕೆ ತೊಡಕಾಗಿರುವುದೇ ಸುಹೈಲ್ ಕಂದಕ್ ಬಂಧನದ ರಹಸ್ಯ.ಕೊರೋನ ವಾರಿಯರ್ಸ್ ಗಳ ಸೇವೆಗಿಂತ ಮೆಡಿಕಲ್ ಮಾಫಿಯಾಗಳೇ ಇಲ್ಲಿ ಮೇಳೈಸುವುದಾದರೆ ಜಿಲ್ಲಾಡಳಿತದ ವೈಫಲ್ಯದ ವಿರುದ್ಧ ತೀವ್ರ ಹೋರಾಟ ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp