Home ಟಾಪ್ ಸುದ್ದಿಗಳು ಬಾಬಾ ಬುಡಾನ್ ಗಿರಿ ವಿಚಾರಕ್ಕೆ ಸಂಬಂಧಪಟ್ಟಂತೆ ಆಕ್ಷೇಪಣಾ ಕಾಲಾವಧಿ ವಿಸ್ತರಿಸಿ: ಜಿಲ್ಲಾಧಿಕಾರಿಗೆ SDPI ಮನವಿ

ಬಾಬಾ ಬುಡಾನ್ ಗಿರಿ ವಿಚಾರಕ್ಕೆ ಸಂಬಂಧಪಟ್ಟಂತೆ ಆಕ್ಷೇಪಣಾ ಕಾಲಾವಧಿ ವಿಸ್ತರಿಸಿ: ಜಿಲ್ಲಾಧಿಕಾರಿಗೆ SDPI ಮನವಿ

►ಚಿಕ್ಕಮಗಳೂರಿನಲ್ಲೂ ಅಹವಾಲು ಸಲ್ಲಿಕೆಗೆ ಅವಕಾಶ ಕಲ್ಪಿಸಲು ಆಗ್ರಹ

ಚಿಕ್ಕಮಗಳೂರು: ಬಾಬಾಬುಡನ್ ಗಿರಿ ದರ್ಗಾ ವಿಚಾರಕ್ಕೆ ಸಂಬಂಧಿಸಿದಂತೆ ಸಲಹೆ, ಆಕ್ಷೇಪಣೆ ಸಲ್ಲಿಸಲು ನೀಡಿರುವ ಕಾಲಾವಕಾಶವನ್ನು ವಿಸ್ತರಿಸಬೇಕು ಮತ್ತು ಚಿಕ್ಕಮಗಳೂರಿನಲ್ಲಿ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

 ಜಿಲ್ಲಾ ಉಪಾಧ್ಯಕ್ಷ ಅಜ್ಮತ್ ಮತ್ತು ಇತರರು ಮನವಿ ಸಲ್ಲಿಸಿದ್ದು, 30 ದಿನಗಳ ಒಳಗಾಗಿ ಸಲಹೆ, ಆಕ್ಷೇಪಣೆ, ಹೇಳಿಕೆಗಳನ್ನು ಲಿಖಿತವಾಗಿ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬೇಕೆಂದು ಸರ್ಕಾರವು ಅ .11 ರಂದು ಸಾರ್ವಜನಿಕ ಪ್ರಕಟಣೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದೆ. ಸಲ್ಲಿಕೆಗೆ ಬೆಂಗಳೂರಿನ ವಿಳಾಸ ನೀಡಲಾಗಿದೆ. ಬೆಂಗಳೂರಿಗೆ ಹೋಗಿ ಎಲ್ಲರೂ ಅಹವಾಲು ಸಲ್ಲಿಸಲು ಕಷ್ಟ. ನೀಡಿರುವ ಕಾಲಾವಕಾಶವು ಕಡಿಮೆ ಇದೆ. ಈಗ ತುಂಬಾ ಮಳೆ ಇದ್ದು , ಎಲ್ಲದಕ್ಕೂ ತೊಂದರೆಯಾಗಿದೆ. ಹೀಗಾಗಿ ಕಾಲಾವಕಾಶವನ್ನು ವಿಸ್ತರಿಸಬೇಕು ಮತ್ತು ಚಿಕ್ಕಮಗಳೂರಿನಲ್ಲಿ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದಾರೆ .

 ಬಾಬಾಬುಡನ್ ಗಿರಿಯಲ್ಲಿನ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾ ಈ ಅಧಿಸೂಚಿತ ಸಂಸ್ಥೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸೆ.28 ರಂದು ನೀಡಿರುವ ಆದೇಶದಲ್ಲಿ ರಾಜ್ಯ ಸರ್ಕಾರವು 2018ರ ಮಾರ್ಚ್‌ 19 ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ. ಈ ವಿಚಾರವನ್ನು ಹೊಸದಾಗಿ ಪರಿಗಣಿಸಿ ಕಾನೂನು ರೀತಿಯ ಅದೇಶ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರ್ಕಾರವು ಕಾನೂನು ಸಂಸದೀಯ ವ್ಯವಹಾರಗಳ ಸಚಿವರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿದೆ . ಗುರುದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾ ವಿಷಯ, ಧಾರ್ಮಿಕ ದತ್ತಿ ಇಲಾಖೆಯ ಅಯುಕ್ತರ 2010 ರ ಮಾರ್ಚ್ 10 ರ ವರದಿಯಲ್ಲಿನ ಅಂಶ ವಿಚಾರಣಾ ವರದಿಯಲ್ಲಿನ ಅಂಶಗಳ ಬಗ್ಗೆ ಸಾರ್ವಜನಿಕರು ಸಲಹೆ, ಆಕ್ಷೇಪಣೆ, ಹೇಳಿಕೆಗಳನ್ನು ಪೂರಕ ದಾಖಲೆಗಳೊಂದಿಗೆ ಸಲ್ಲಿಸಲು ಸೂಚಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ .

Join Whatsapp
Exit mobile version