Home ಕರಾವಳಿ SDPI ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್-2020 ಪ್ರಧಾನ ಸಮಾರಂಭ

SDPI ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್-2020 ಪ್ರಧಾನ ಸಮಾರಂಭ

‌ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ 5 ನೇ ವಾರ್ಡ್ ಕಾಟಿಪಳ್ಳ ವತಿಯಿಂದ ಏರ್ಪಡಿಸಿದ ಕಾಟಿಪಳ್ಳ 5 ನೇ ವಾರ್ಡ್ ಪ್ರದೇಶದ SSLC ದ್ವಿತೀಯ ಪಿಯುಸಿ ಪಾಸಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಸ್ಡಿಪಿಐ ಅಕಾಡಮಿಕ್ ಎಕ್ಸಲೆನ್ಸ್ ಅವಾರ್ಡ್-2020 ಪ್ರಧಾನ ಸಮಾರಂಭ ಕಾಟಿಪಳ್ಳ ಯುನಿಟಿ ಹಾಲ್ ನಲ್ಲಿ ಜರಗಿತು.

ಎಸ್ಡಿಪಿಐ ದ.ಕ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಕುಳಾಯಿ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು.  ಎಸ್ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮಾತನಾಡಿ ವಿಧ್ಯಾರ್ಥಿಗಳು ಭವಿಷ್ಯದ ಗುರಿಯನ್ನಿಟ್ಟುಕೊಂಡು ಕಲಿಯಬೇಕು,ನಮ್ಮ ಕಲಿಕೆಯು ಡಾಕ್ಟರ್, ಇಂಜಿನಿಯರಿಂಗ್ ಗೆ ಮಾತ್ರ ಸೀಮಿತಗೊಳಿಸದೆ ದೇಶದ ಆಡಳಿತ ಯಂತ್ರದಲ್ಲಿ ಪಾಲ್ಗೊಳ್ಳುವಿಕೆಗೆ ಪೂರಕವಾಗಬೇಕು, ಗುರುತಿಸುವಿಕಿಯ ಉನ್ನತ ಸ್ಥಾನವನ್ನು ಪಡೆದು ಸಮಾಜ-ಸಮುದಾಯದ ಸಂಪತ್ತಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ-ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಗೈದ ಖತೀಜ ಅಫ್ರ (95.36),  ಅಫ್ರ ರಾಹಿಲಾ(95.52) , ರೀಮಾ ಫಾತಿಮಾ(92.32),  ನಹೀಮಾ ಸಮನ್ (91.52) , ಸುಮಯ್ಯ ಶಿಫಾನ(93.12), ಶೈಮಾ(93) D/o ಹಾಝರ ಸಹಲ(92.8), ಮೊಹಮ್ಮದ್ ಆಶಿಕ್ ಮಕ್ತೂಮ್(90.56) ,  ಸಫಿಯತ್ ಸಭಾ(95), ತಂಝೀಮ್(91) ಈ ಎಲ್ಲಾ ವಿಧ್ಯಾರ್ಥಿಗಳಿಗೆ ಸ್ಥಳೀಯ ಕಾರ್ಪೊರೇಟರ್ ಶಂಷಾದ್ ಅಬೂಬಕ್ಕರ್ ಶಾಲು ಹೊದಿಸಿ  ಸ್ಮರಣಿಕೆ,ಫಲಪುಷ್ಪ ನೀಡಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುರತ್ಕಲ್ ಪ್ರದೇಶ ಅಧ್ಯಕ್ಷ ಹನೀಫ್ ಕಾಟಿಪಳ್ಳ ವಹಿಸಿದ್ದರು. ಅಬ್ದುಲ್ ಜಬ್ಬಾರ್ ಕ್ರಷ್ಣಾಪುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Join Whatsapp
Exit mobile version